ಇಪಿಎಫ್‌ಒ ವತಿಯಿಂದ ಕೋವಿಡ್-19 ಎರಡನೇ ಮುಂಗಡ ಪಡೆಯಲು ಅನುಮತಿ.

ಬೆಂಗಳೂರು, ಜೂನ್ 1, 2021 (www.justkannada.in): ದೇಶದಲ್ಲಿ ಕೋವಿಡ್ ಸೋಂಕಿನ ಎರಡನೆ ಅಲೆಯಿಂದಾಗಿ ಉದ್ಭವಿಸುತ್ತಿರುವ ಸಮಸ್ಯೆಗಳನ್ನು ಗಮನಿಸಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್‌ಒ) ತನ್ನ ಐದು ಕೋಟಿಗಳಿಗೂ ಹೆಚ್ಚಿನ ಸಂಖ್ಯೆಯ ಚಂದಾದಾರರಿಗೆ ಎರಡನೇ ಕೋವಿಡ್-19 ಮುಂಗಡ ಪಡೆಯಲು ಅನುಮತಿಸಿದೆ.jk

ಕಳೆದ ವರ್ಷವೂ ಸಹ ಇಪಿಎಫ್‌ ಒ ಸದಸ್ಯರಿಗೆ ಆಸ್ಪತ್ರೆ ಒಳಗೊಂಡಂತೆ ವಿವಿಧ ವೆಚ್ಚಗಳನ್ನು ಭರಿಸಲು ಅನುಕೂಲವಾಗುವಂತೆ ಕೋವಿಡ್-19 ಮುಂಗಡ ಹಣವನ್ನು ಪಡೆಯಲು ಅನುಮತಿಸಿತ್ತು.

ಸದಸ್ಯರು, ಮೂರು ತಿಂಗಳ ಮೂಲ ವೇತನ (ಮೂಲ ವೇತನ+ಡಿಎ) ಅಥವಾ ಅವರ ಭವಿಷ್ಯ ನಿಧಿ ಖಾತೆಯಲ್ಲಿರುವ ಒಟ್ಟು ಮೊತ್ತದ ಪೈಕಿ 75%ರಷ್ಟು ಹಣವನ್ನು ಯಾವುದು ಕಡಿಮೆಯೋ ಅಷ್ಟನ್ನು ವಿತ್‌ ಡ್ರಾ ಮಾಡಿಕೊಳ್ಳಲು ಅನುಮಿತಿಸಿದೆ.

ಕಾರ್ಮಿಕ ಮಂತ್ರಾಲಯದ ಒಂದು ಹೇಳಿಕೆಯ ಪ್ರಕಾರ, ಈ ವರ್ಷ ಜನರು ಕೋವಿಡ್ ಎರಡನೆ ಅಲೆಯ ಪರಿಣಾಮಗಳನ್ನು ಎದುರಿಸುತ್ತಿದ್ದು, ಸದಸ್ಯರ ಅನುಕೂಲಕ್ಕಾಗಿ ಭವಿಷ್ಯ ನಿಧಿಯಿಂದ ಮುಂಗಡ ಹಣ ಪಡೆಯಲು ಅನುಮತಿಸಿದೆ. ಕಳೆದ ವರ್ಷ ಮಾರ್ಚ್ 2020 ರಂದು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿಎಂಜಿಕೆವೈ) ಅಡಿ ಕೋವಿಡ್ ಸೋಂಕಿನಿಂದಾಗಿ ಉದ್ಭವಿಸಿದ್ದಂತಹ ಹಣಕಾಸಿನ ಮುಗ್ಗಟ್ಟನ್ನು ಎದುರಿಸಲು ಭವಿಷ್ಯ ನಿಧಿ ಖಾತೆಯಿಂದ ಹಣವನ್ನು ವಿತ್‌ ಡ್ರಾ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

ಕೇಂದ್ರದ ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯವು ಅಧಿಕೃತ ಗೆಜೆಟ್ ಅಧಿಸೂಚನೆಯನ್ನು ಹೊರಡಿಸುವ ಮೂಲಕ ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ,  1952 ಕಾಯ್ದೆಯ, ಪ್ಯಾರಾ 68 ಎಲ್ ರಡಿ ಸಬ್-ಪ್ಯಾರಾ (3) ಅನ್ನು ಸೇರ್ಪಡೆ ಮಾಡಿ ಕಾಯ್ದೆಗೆ ತಿದ್ದುಪಡಿ ಮಾಡಿತ್ತು. ಈ ಪ್ರಾವಧಾನದ ಪ್ರಕಾರ, ಮೂರು ತಿಂಗಳ ಮೂಲ ವೇತನ ಹಾಗೂ ತುಟ್ಟಿ ಭತ್ಯೆ (ಡಿಎ) ಅಥವಾ ಸದಸ್ಯರ ಇಪಿಎಫ್ ಖಾತೆಯಲ್ಲಿರುವ ಒಟ್ಟು ಮೊತ್ತದ ಪೈಕಿ ಶೇ.75ರಷ್ಟು ಯಾವುದು ಕಡಿಮೆಯೋ ಅಷ್ಟು ಮೊತ್ತವನ್ನು ಮರುಪಾವತಿಸಲಾಗದಿರುವ ವಿತ್‌ಡ್ರಾವಲ್‌ ಗೆ ಅನುಮತಿಸಿದೆ.

ಇಪಿಎಫ್‌ಒ ಒದಗಿಸಿದಂತಹ ಈ ಕೋವಿಡ್-19 ಮುಂಗಡ ಯೋಜನೆ ಇಪಿಎಫ್ ಸದಸ್ಯರುಗಳಿಗೆ ಬಹಳ ಅನುಕೂಲವನ್ನು ಒದಗಿಸಿತ್ತು, ವಿಶೇಷವಾಗಿ ರೂ.15000 ಕ್ಕಿಂತ ಕಡಿಮೆ ವೇತನ ಪಡೆಯುತ್ತಿದ್ದಂತಹ ಉದ್ಯೋಗಿಗಳಿಗೆ. ಈವರೆಗೆ ಇಪಿಎಫ್‌ಒ ೭೬.೩೧ ಲಕ್ಷ ಕೋವಿಡ್-೧೯ ಮುಂಗಡ ಕ್ಲೇಮ್‌ಗಳನ್ನು ಇತ್ಯರ್ಥಗೊಳಿಸಿದ್ದು, ಒಟ್ಟು ರೂ.೧೮,೬೯೮.೧೫ ಕೋಟಿ ಮೊತ್ತವನ್ನು ವಿತರಿಸಿದೆ.

ಕೋವಿಡ್ ಎರಡನೆ ಅಲೆಯಡಿ ಈ ವರ್ಷ ‘ಮ್ಯೂಕೊರ್‌ಮೈಕೊಸಿಸ್’ ಅಥವಾ ‘ಬ್ಲಾಕ್ ಫಂಗಸ್’ ಸಮಸ್ಯೆ ಗೋಚರಿಸಿದೆ. ಇಂತಹ ಸಮಯದಲ್ಲಿ ಇಪಿಎಫ್‌ಒನ ಒದಗಿಸಿರುವ ಈ ಅವಕಾಶ ಅಗತ್ಯವಿರುವ ಭವಿಷ್ಯ ನಿಧಿ ಸದಸ್ಯರ ಹಣಕಾಸಿನ ಮುಗ್ಗಟ್ಟನ್ನು ಸಾಕಷ್ಟು ಮಟ್ಟದವರೆಗೆ ನೀಗಿಸುತ್ತದೆ. ಹಿಂದಿನ ವರ್ಷ ಕೋವಿಡ್-19 ಮೊದಲನೆ ಅಲೆಯಲ್ಲಿ ಕೋವಿಡ್-19 ಮುಂಗಡ ಪಡೆದುಕೊಂಡಿದ್ದಂತಹ ಸದಸ್ಯರೂ ಸಹ ಈಗ ಹಿಂದಿನ ವರ್ಷದಂತೆಯೇ ಎರಡನೆ ಮುಂಗಡವನ್ನು ಪಡೆದುಕೊಳ್ಳಬಹುದು.

ಸದಸ್ಯರ ಕ್ಲೇಮ್‌ಗಳನ್ನು ಇಪಿಎಫ್‌ಒ ಮೂರು ದಿನಗಳ ಒಳಗೆ ಇತ್ಯರ್ಥಪಡಿಸುವುದಾಗಿ ತಿಳಿಸಿದೆ. ಇದಕ್ಕಾಗಿ ಇಪಿಎಫ್‌ಒ ಸಂಸ್ಥೆಯು ಕೆವೈಸಿ ಸರಿಯಾಗಿ ಪೂರೈಸಿರುವ ಎಲ್ಲಾ ಸದಸ್ಯರಿಗೆ ಅನುಕೂಲವಾಗುವಂತೆ ಸಿಸ್ಟಂ ಚಾಲಿತ ಸ್ವಯಂ-ಕ್ಲೇಂ ಸೆಟ್ಲ್ಮೆಂಟ್ ಪ್ರಕ್ರಿಯೆಯನ್ನು ಪರಿಚಯಿಸಿದೆ. ಈ ಪ್ರಕ್ರಿಯೆಯು ಸಂಸ್ಥೆಗೆ ಕ್ಲೇಮ್‌ ಗಳನ್ನು ಇತ್ಯರ್ಥಪಡಿಸುವ ಸಮಯವನ್ನು ಹಿಂದೆ ಇದ್ದಂತಹ 20 ದಿನಗಳ ಸ್ಥಾನದಲ್ಲಿ 3 ದಿನಗಳಿಗೆ ಇಳಿಕೆ ಮಾಡುವಿಲ್ಲಿ ನೆರವಾಗಿದೆ.

ಮೂಲ: ದಿ ವೀಕ್ ಆಂಗ್ಲ ಮ್ಯಾಗಜಿನ್

Key words: epfo-allows-members-to-avail-second-covid-19-advance