ಸೂರ್ಯಕುಮಾರ್ ಯಾದವ್, ಪೃಥ್ವಿ ಶಾಗೆ ಇಂಗ್ಲೆಂಡ್ ಟಿಕೆಟ್ ಫಿಕ್ಸ್!

ಬೆಂಗಳೂರು, 27, ಜುಲೈ 2021 (www.justkannada.in): ಟೆಸ್ಟ್ ಸರಣಿಗಾಗಿ ಭಾರತ ತಂಡ ಮತ್ತೆ ಇಬ್ಬರು ಆಟಗಾರರನ್ನು ಇಂಗ್ಲೆಂಡ್ ಗೆ ಕರೆಸಲಾಗುತ್ತಿದೆ.

ತಂಡಕ್ಕೆ ಗಾಯಾಳುಗಳ ಸಮಸ್ಯೆ ಕಾಡುತ್ತಿದ್ದು, ಹೀಗಾಗಿ ಮತ್ತೆ ಇಬ್ಬರು ಆಟಗಾರರನ್ನು ಇಂಗ್ಲೆಂಡ್ ಗೆ ಕರೆಸಲಾಗುತ್ತಿದೆ.

ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಗಾಯಗೊಂಡಿದ್ದರು. ಅಭ್ಯಾಸ ಪಂದ್ಯದಲ್ಲಿ ಆವೇಶ್ ಖಾನ್, ವಾಷಿಂಗ್ಟನ್ ಸುಂದರ್ ಗಾಯಗೊಂಡಿದ್ದಾರೆ.

ಈ ಕಾರಣಗಳಿಂದ ಬಿಸಿಸಿಐ ಯುವ ಆಟಗಾರರಾದ ಸೂರ್ಯಕುಮಾರ್ ಯಾದವ್ ಮತ್ತು ಪೃಥ್ವಿ ಶಾ ರನ್ನು ಆಯ್ಕೆ ಮಾಡಿದೆ. ಈ ಇಬ್ಬರೂ ಶ್ರೀಲಂಕಾ ವಿರುದ್ದ ಸರಣಿ ಆಡುತ್ತಿದ್ದು, ಅಲ್ಲಿಂದಲೇ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ.