ವಿದ್ಯುತ್ ದರ ಏರಿಕೆಗೆ ಕಾರಣ ಕೊಟ್ಟ ಇಂಧನ ಸಚಿವ ಸುನೀಲ್ ಕುಮಾರ್.

ಉಡುಪಿ,ಸೆಪ್ಟಂಬರ್,24,2022(www.justkannada.in):  ರಾಜ್ಯದಲ್ಲಿ ಅಕ್ಟೋಬರ್ 1 ರಿಂದ ವಿದ್ಯುತ್ ದರ ಏರಿಕೆಗೆ ಸರ್ಕಾರ ಮುಂದಾಗಿದ್ದು ದರ ಏರಿಕೆಗೆ ಇಂಧನ ಸಚಿವ ಸುನೀಲ್ ಕುಮಾರ್ ಕಾರಣ ತಿಳಿಸಿದ್ದಾರೆ.

ಈ ಕುರಿತು ಉಡುಪಿಯಲ್ಲಿ ಮಾತನಾಡಿದ ಸಚಿವ ಸುನೀಲ್ ಕುಮಾರ್, ವಿದ್ಯುತ್ ದರ ಏರಿಕೆ ವರ್ಷಕ್ಕೆ ಒಂದು ಬಾರಿ ನಡೆಯುತ್ತದೆ. ಕಲ್ಲಿದ್ದಲು ಬೆಲೆ ಏರಿಕೆ ಹೊಂದಾಣಿಕೆ ಮಾಡಿ ದರ ನಿಗದಿ ಮಾಡಲಾಗುತ್ತದೆ 9 ವರ್ಷದಿಂದ 3 ತಿಂಗಳಿಗೊಮ್ಮೆ ಕಲ್ಲಿದ್ದಲು ದರ ನಿಗದಿ ಮಾಡಲಾಗುತ್ತಿದೆ. ಕಲ್ಲಿದ್ದಲು ಬೆಲೆ ಹೊಂದಾಣಿಕೆಗೋಸ್ಕರ ದರ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ನಿಂದ ಪೇ ಸಿಎಂ ಅಭಿಯಾನ ಕುರಿತು ಮಾತನಾಡಿದ ಸಚಿವ ಸುನೀಲ್ ಕುಮಾರ್,  ಕಾಂಗ್ರೆಸ್ ನವರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಪೇ ಸಿಎಂ ಎಂಬುವುದು ಕಾಂಗ್ರೆಸ್ ಸುಳ್ಳಿನ ಸುರಿಮಳೆ. ಪೋಸ್ಟರ್ ಅಂಟಿಸಿ ಡಿಕೆ ಶಿವಕುಮಾರ್ ಇಡಿ ಕಚೇರಿಗೆ ಹೋಗಿದ್ಯಾಕೆ..?  ಭ್ರಷ್ಟಾಚಾರ ಪ್ರಕರಣಲ್ಲಿ ಇಡಿ ವಿಚಾರಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಇದೀಗ ಪೇ ಸಿಎಂ ಎಂದು ಪೋಸ್ಟರ್ ಅಂಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.

Key words: Energy Minister- Sunil Kumar -rise – electricity -rates.