ದಸರಾ: ಈ ಬಾರಿಯ ಜಂಬೂ ಸವಾರಿ ಮಿಸ್ ಮಾಡಿಕೊಳ್ಳಲಿದ್ದಾನೆ ‘ವಿಕ್ರಮ’

ಮೈಸೂರು, ಅಕ್ಟೋಬರ್ 10, 2021 (www.justkannada.in): ವಿಕ್ರಮ ಆನೆಗೆ ಮದವೇರಿದ್ದು, ಹೀಗಾಗಿ ಆ ಆನೆಯನ್ನು ದಸರಾ ಕಾರ್ಯಕ್ರಮಕ್ಕೆ ಬಳಸಿಕೊಳ್ಳುತ್ತಿಲ್ಲ.

ಈ ಕುರಿತು ಡಿಸಿಎಫ್ ಕರಿಕಾಳನ್ ಮಾಹಿತಿ ನೀಡಿದ್ದು, ಈ ರೀತಿಯ ಸಮಸ್ಯೆ ಆಗುವ ಕಾರಣ ಮೂರು ಆನೆ ಹೆಚ್ಚುವರಿಯಾಗಿ ತಂದಿದ್ದೇವೆ ಎಂದು ಡಿಸಿಎಫ್ ತಿಳಿಸಿದ್ದಾರೆ.

ಜಂಬೂಸವಾರಿಗೆ ಐದು ಆನೆಗಳು ಮಾತ್ರ ಸಾಕು. ಆದರೆ ನಾವು 8 ಆನೆಗಳು ತಂದಿದ್ದು, ನಗರದ ವಾತಾವರಣಕ್ಕೆ ಹೊಂದಿಕೊಳ್ಳಲು ಕೊನೆ ಹಂತದಲ್ಲಿ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.

ದಸರಾ ವೇಳೆ ಆನೆ ಅಭಿಮನ್ಯು ಅಕ್ಕಪಕ್ಕ ಎರಡು ಹೆಣ್ಣಾನೆಗಳು ಬಳಕೆ ಆಗುತ್ತವೆ. ನಿಶಾನೆ ಆನೆ, ನೌಪತ್ ಆನೆ ಸೇರಿ ಒಟ್ಟು 5 ಆನೆ ಜಂಬೂ ಸವಾರಿಯಲ್ಲಿ ಬಳಸಿಕೊಳ್ಳಲಾಗುವುದು ಎಂದು ಕರಿಕಾಳನ್ ಮಾಹಿತಿ ನೀಡಿದ್ದಾರೆ.

key words: elephant vikrama will miss jamboo savari this time says dcf karikalan