ಮೈಸೂರಲ್ಲಿ ಮತ್ತೆ ಶುರುವಾಯ್ತು ಆನೆ- ಮಾನವ ಸಂಘರ್ಷ: ಕಾಡಾನೆಗಳ ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಹರಸಾಹಸ…

ಮೈಸೂರು,ಮೇ,3,2019(www.justkannada.in):   ಮೈಸೂರಿನಲ್ಲಿ ಮತ್ತೆ ಆನೆ- ಮಾನವ ಸಂಘರ್ಷ ಶುರುವಾಗಿದ್ದು ಮೈಸೂರು ತಾಲ್ಲೂಕಿನಲ್ಲಿ ಕಾಡಾನೆಗಳು ಪ್ರತ್ಯೇಕ್ಷವಾಗಿದ್ದು ಅವುಗಳನ್ನ ಮತ್ತೆ ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸಪಡುತ್ತಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಬೆಟ್ಟದಬೀಡು ಗ್ರಾಮದಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ, ಮೈಸೂರು ವಲಯ ಅರಣ್ಯದಲ್ಲಿ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿದ್ದು ಸದ್ಯ ಸಾಮಾಜಿಕ ಅರಣ್ಯದಲ್ಲಿ ಆನೆಗಳು ಬೀಡುಬಿಟ್ಟಿವೆ. ಕಳೆದ ವಾರದಿಂದಲೂ ಈ ಕಾಡಾನೆಗಳು  ಜಯಪುರ ಹೋಬಳಿಯ ಸೋಲಿಗರ ಕಾಲೋನಿ, ಮಾವಿನಹಳ್ಳಿ, ಹಾರೋಹಳ್ಳಿ, ಗುಮಚನಹಳ್ಳಿ ಗ್ರಾಮಗಳಲ್ಲಿ ಬೆಳೆ ನಾಶ ಮಾಡಿವೆ.

ಹೀಗಾಗಿ ಕಾಡಾನೆಗಳನ್ನ ಕಾಡಿಗಟ್ಟಲು ಆಗ್ರಹ ಹೆಚ್ಚಾಗಿದ್ದು ಈ ಹಿನ್ನೆಲೆ ಕಳೆದ ಮೂರು ದಿನಗಳಿಂದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಾಕಾನೆಗಳಾದ ಅಭಿಮನ್ಯು, ಕೃಷ್ಣ ಆನೆಗಳ ನೆರವಿನೊಂದಿಗೆ  ಬೆಟ್ಟದಬೀಡು ಗ್ರಾಮದಲ್ಲಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Key words:  elephant-human –conflict- started – Mysore-forest department- staff- oparation