ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್‌ ತಂತಿ  ಸ್ಪರ್ಶಿಸಿ ಕಾಡಾನೆ ಸಾವು.

ಮೈಸೂರು ,ಡಿಸೆಂಬರ್,15,2023(www.justkannada.in): ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್‌ ತಂತಿ  ಸ್ಪರ್ಶಿಸಿ ಕಾಡಾನೆ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಮರಳುಕಟ್ಟೆ ಹಾಡಿ ಜಮೀನಿನಲ್ಲಿ  ನಡೆದಿದೆ.

ಮಣಿ ಎಂಬುವವರ ಜಮೀನಿನಲ್ಲಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು ಕಾಡಾನೆ ಸಾವನ್ನಪ್ಪಿದೆ.  ಜಮೀನು ಮಾಲೀಕ ಮಣಿ ವಿರುದ್ಧ ಪೊಲೀಸ್ ಠಾಣೆಗೆ ಅರಣ್ಯ ಇಲಾಖೆ ದೂರು ದಾಖಲಿಸಿದೆ.

ಜಮೀನಿನ ಸುತ್ತ ಹಾಕಿದ್ದ ಅಕ್ರಮ ವಿದ್ಯುತ್ ತಂತಿ ಹಾಕಲಾಗಿತ್ತು. ಆಹಾರ ಅರಸಿ ಬಂದ ಕಾಡಾನೆ ವಿದ್ಯುತ್ ತಂತಿ ಸ್ಪರ್ಶಿಸಿ  ಸಾವನ್ನಪ್ಪಿದೆ.  ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ  ಸೆಸ್‌ ಗೆ ಅರಣ್ಯ ಇಲಾಖೆಗೆ ಈ ಬಗ್ಗೆ ಪರಿಶೀಲಿಸುವಂತೆ ಪತ್ರ ಬರೆದಿದ್ದು,  ಸೆಸ್ಕ್ ಎಇಇ ಗುರು, ಬಸವರಾಜು ಪರಿಶೀಲಿಸಿ, ಆನೆ ಅಕ್ರಮ ವಿದ್ಯುತ್‌ ಗೆ ಬಲಿಯಾಗಿರುವುನ್ನು ತಿಳಿಸಿದರು.  ವಿದ್ಯುತ್ ಪರಿವೀಕ್ಷಕ ಅಧಿಕಾರಿ ವೀಣಾ ಭೇಟಿ ನೀಡಿ ಪರಿಶೀಲಿಸಿದರು. ಅರಣ್ಯ ಇಲಾಖೆಯ ವನ್ಯಜೀವಿ ಪಶುವೈದ್ಯ ಚೆಟ್ಟಿಯಪ್ಪ ಅವರಯ  ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು.

Key words: elephant- died -after -touching – illegally – electric wire.