ಮೊಹರಂ ಮೆರವಣಿಗೆ ವೇಳೆ ದುರಂತ: ಇಬ್ಬರು ಸಾವು.

ರಾಯಚೂರು,ಆಗಸ್ಟ್,20,2021(www.justkannada.in):  ಮೊಹರಂ ಮೆರವಣಿಗೆಯ ವೇಳೆ ವಿದ್ಯುತ್  ತಂತಿ ತಗುಲಿ ಇಬ್ಬರು ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಸಂತೆಕಲ್ಲೂರಿನಲ್ಲಿ ನಡೆದ ಮೊಹರಂ ಮೆರವಳಿಗೆ ಸಂದರ್ಭದಲ್ಲಿ ಘಟನೆ ನಡೆದಿದೆ. 50 ವರ್ಷದ ಹುಸೇನ್ ಸಾಬ್, 23 ವರ್ಷದ ಹುಲಿಗೆಮ್ಮ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ದೇವರನ್ನು ಹೊತ್ತುಕೊಂಡಿದ್ದ ಛತ್ರಿಗೆ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ. ದೇವರನ್ನು ಹೊತ್ತುಕೊಂಡಿದ್ದ 50 ವರ್ಷದ ಹುಸೇನ್ ಸಾಬ್ ಮತ್ತು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು ಸ್ಥಳಕ್ಕೆ ಮಸ್ಕಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: electric shock– Moharram –two-death-raichur