ಬೆಂಗಳೂರು,ಡಿಸೆಂಬರ್,26,2025 (www.justkannada.in): ರಾಜ್ಯದಲ್ಲಿ 2028ಕ್ಕಿಂತ ಮೊದಲೇ ಚುನಾವಣೆ ನಡೆದರೇ ನಡೆಯಬಹುದು. ಚುನಾವಣೆ ನಡೆದರೇ ಬಿಜೆಪಿ 130ರಿಂದ 140 ಸ್ಥಾನಗಳನ್ನು ಗೆಲ್ಲುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಕಾಂಗ್ರೆಸ್ ಮನೆಯಲ್ಲಿ ಕುರ್ಚಿ ಕಿತ್ತಾಟ ಹೆಚ್ಚಾಗಿದೆ. ಕಾಂಗ್ರೆಸ್ ನಲ್ಲಿ ದಿನಕ್ಕೊಬ್ಬರು ಸಿಎಂ ಆಕಾಂಕ್ಷಿಗಳಾಗುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ 2028ಕ್ಕಿಂತ ಮುಂಚಿತವಾಗಿಯೂ ಎಲೆಕ್ಷನ್ ಆಗಬಹುದು. ಯಾವುದೇ ಕ್ಷಣದಲ್ಲಿ ಎಲೆಕ್ಷನ್ ಆಗಬಹುದು ಎಂದು ಭವಿಷ್ಯ ನುಡಿದರು.
ಒಂದು ವೇಳೆ ಚುನಾವಣೆ ಆದರೆ ಚುನಾವಣೆಯಲ್ಲಿ ಬಿಜೆಪಿಗೆ 130 ರಿಂದ 140 ಸ್ಥಾನಗಳು ಬರುತ್ತದೆ ಎಂದು ಬಿವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
Key words: elections, BJP, 130 to 140 seats, BY Vijayendra







