ಚುನಾವಣೆ ಇರೋದು ನಮಗೆ, ಸಿಬಿಐಗೆ ಅಲ್ಲ-ಕಾಂಗ್ರೆಸ್ ನಾಯಕರಿಗೆ ಸಿ.ಟಿ ರವಿ ಟಾಂಗ್…

ಬೆಂಗಳೂರು,ಅಕ್ಟೋಬರ್,8,2020(www.justkannada.in):   ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿವಾಸದ ಮೇಲಿನ ಸಿಬಿಐ ದಾಳಿ ರಾಜಕೀಯ ಪ್ರೇರಿತ. ಉಪಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಸಿಬಿಐ ದಾಳಿ ನಡೆಸಿದ್ದಾರೆ. ಇದು ದುರುದ್ದೇಶಪೂರಿತ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಪ್ರವಾಸೋದ್ಯಮ ಸಚಿವ ಸಿಟಿ ರವಿ ಟಾಂಗ್ ನೀಡಿದ್ದಾರೆ.jk-logo-justkannada-logo

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಸಿ.ಟಿ ರವಿ, ಡಿ.ಕೆ ಶಿವಕುಮಾರ್ ನಿವಾಸದ ಮೇಲಿನ ಸಿಬಿಐ ದಾಳಿ ತನಿಖೆಯ ಮುಂದುವರೆದ ಭಾಗ. ಚುನಾವಣೆ ಇರೋದು ನಮಗೆ ಸಿಬಿಐಗೆ ಅಲ್ಲ. ಇದು ಉಪಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.election-us-not-cbi-minister-ct-ravi-tong-congress-leader

ಇನ್ನು ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಹೈಕಮಾಂಡ್ ಮುಂದೆ ಎಲ್ಲವೂ ಚರ್ಚೆ ನಡೆದಿದೆ. ಬಿಜೆಪಿ ನಿರ್ಧಾರಕ್ಕೆ ನಾನು ಬಗ್ಗೆ ಎಂದು ಸಿ.ಟಿ ರವಿ ತಿಳಿಸಿದರು. ಹಾಗೆಯೇ ಆರ್.ಆರ್ ನಗರ ಮತ್ತು ಶಿರ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: election – us-not – CBI-Minister -CT Ravi –Tong-congress leader