ವಿಧಾನಪರಿಷತ್ ನ ಒಂದು ಸ್ಥಾನಕ್ಕೆ ಚುನಾವಣೆ: ಕಣದಿಂದ ನಿವೃತ್ತಿ ಪಡೆದ ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್…

ಬೆಂಗಳೂರು,ಫೆ,15,2020(www.justkannada.in): ಫೆಬ್ರವರಿ 17 ರಂದು ನಡೆಯುವ ವಿಧಾನಪರಿಷತ್ ನ ಒಂದು ಸ್ಥಾನದ ಚುನಾವಣಾ ಕಣದಿಂದ ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್ ಹಿಂದೆ ಸರಿದಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ್ ಸವದಿ ಗೆಲುವಿನ ಹಾದಿ ಸುಗಮವಾಗಿದೆ.

 ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅನಿಲ್ ಕುಮಾರ್ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.  ಕೈಬರಹದ ಪತ್ರ ಬರೆದು ಅದನ್ನ ಇಮೇಲ್ ಮೂಲಕ  ಅನಿಲ್ ಕುಮಾರ್ ಚುನಾವಣಾಧಿಕಾರಿಗೆ ರವಾನಿಸಿದ್ದಾರೆ.

ಫೆ. 17ರಂದು ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ.ಶಾಸಕರಾಗಿ ಆಯ್ಕೆಯಾಗಿರುವ  ರಿಜ್ವಾನ್ ಅರ್ಷದ್ ರಿಂದ ತೆರವಾಗಿರುವ ವಿಧಾನಪರಿಷತ್ ಸ್ಥಾನಕ್ಕೆ ಫೆಬ್ರವರಿ 17 ರಂದು ಚುನಾವಣೆ ನಡೆಯಲಿದೆ.

Key words: Election – Legislative Council-Independent candidate –anil kumar- retired