ನಾನು ಮುಂದೆ ಚುನಾವಣೆಯಲ್ಲಿ ನಿಲ್ಲಲ್ಲ- ಗೀತಾ ಶಿವರಾಜ್ ಕುಮಾರ್

ಶಿವಮೊಗ್ಗ,ಸೆಪ್ಟಂಬರ್,27,2025 (www.justkannada.in): ನಾನು ಮುಂದೆ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಗೀತಾ ಶಿವರಾಜ್ ಕುಮಾರ್ ಘೋಷಣೆ ಮಾಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೀತಾ ಶಿವರಾಜ್ ಕುಮಾರ್, ಸಾಕಷ್ಟು ಜನ ಹೊಸಬರಿದ್ದಾರೆ. ಅವರಿಗೆ ಸಾಮರ್ಥ್ಯವಿದೆ. ನಾನು 2 ಬಾರಿ ಲೋಕಸಭಾ ಚುನಾವಣೆಯಲ್ಲಿ ನಿಂತಿದ್ದೇನೆ  ಸಾಕು. ಯುವಕರು ಬಂದಿದ್ದಾರೆ ಅವರು ಸ್ಪರ್ಧಿಸುವ ಸಮಯ ಪಕ್ಷದ ನಾಯಕರುಹೇಳಿದರೇ ಪ್ರವಾರಕ್ಕಾಗಿ ಓಡಾಡುತ್ತೇನೆ ಎಂದರು.

ನಾನು ಸೌಮ್ಯರೆಡ್ಡಿ ಅವರಿಗೆ ಸಹಕಾರವನ್ನ ನೀಡುತ್ತೇನೆ. ಇದು ನನ್ನ ನಿರ್ಧಾರ. ಪತಿ ಶಿವರಾಜ್ ಕುಮಾರ್, ಸಹೋದರ ಮಧುಗೂ ಹೇಳಿಲ್ಲ. ನನ್ನ ನಿರ್ಧಾರಕ್ಕೆ ಅವರು ಯಾವಾಗಲೂ ಸಹಕಾರ ನೀಡುತ್ತಾರೆ ಎಂದು ಗೀತಾ ಶಿವರಾಜ್ ಕುಮಾರ್ ತಿಳಿಸಿದರು.

Key words:  election, Geetha Shivaraj Kumar, Shimoga