ಪಕ್ಷೇತರ  ಅಭ್ಯರ್ಥಿ ಕೆ. ಎಸ್ ಈಶ್ವರಪ್ಪಗೆ ಚಿಹ್ನೆ ನೀಡಿದ ಚುನಾವಣಾ ಆಯೋಗ.

ಶಿವಮೊಗ್ಗ,ಏಪ್ರಿಲ್,22,2024 (www.justkannada.in):  ಪುತ್ರನಿಗೆ ಹಾವೇರಿ ಲೋಕಸಭಾ  ಕ್ಷೇತ್ರದಿಂದ ಬಿಜೆಪಿ ಟಿಕೆಟ್  ಕೈತಪ್ಪಿದ ಹಿನ್ನಲೆಯಲ್ಲಿ ಬಂಡಾಯವೆದ್ದು  ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಚುನಾವಣಾ ಆಯೋಗ ಚಿಹ್ನೆ ನೀಡಿದೆ.

‘ಕಬ್ಬಿನ ಜೊತೆ ಇರುವ ರೈತ’ನ ಚಿಹ್ನೆಯನ್ನು ಕೆ.ಎಸ್ ಈಶ್ವರಪ್ಪಗೆ ನೀಡಲಾಗಿದೆ. ಕಳೆದ ವಿಧಾನಸಭಾ ಚುನಾವಣಾ ವೇಳೆಯೇ ಚುನಾವಣಾ ರಾಜಕೀಯಕ್ಕೆ ರಾಜಕೀಯ ಘೋಷಿಸಿದ್ದ ಕೆ.ಎಸ್ ಈಶ್ವರಪ್ಪ ತಮ್ಮ ಪುತ್ರ ಕಾಂತೇಶ್ ಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು.

ಆದರೆ ತಮ್ಮ ಪುತ್ರ ಕಾಂತೇಶ್ ಗೆ ಟಿಕೆಟ್ ಸಿಗದ ಹಿನ್ನೆಲೆ   ಬಿಜೆಪಿ ವಿರುದ್ದ  ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ಉಳಿದುಕೊಂಡಿದ್ದಾರೆ.

Key words: Election Commission, symbol, K.S Eshwarappa