ಎಸ್ ಎಸ್ ಎಲ್ ಸಿ ಪರೀಕ್ಷೆ ಸಿದ್ಧತೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್….

ಮೈಸೂರು,ಮೇ,29,2020(www.justkannada.in): ಎಸ್ ಎಸ್ ಎಲ್ ಸಿ ಪರೀಕ್ಷೆ  ಜೂನ್ 25ರಿಂದ ಜುಲೈ 4ರವರೆಗೆ ವೇಳಾಪಟ್ಟಿ ನಿಗದಿಯಾಗಿದೆ. 8.48 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು. ಹೊಸ ವಾತಾವರಣದಲ್ಲಿ ಪರೀಕ್ಷೆ ನಡೆಸಬೇಕಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಎಸ್ ಎಸ್ ಎಲ್ ಸಿ ಪರೀಕ್ಷೆ ಸಂಬಂಧ  ಸುದ್ಧಿಗೋಷ್ಠಿ ನಡೆಸಿ ಇಂದು ಮಾತನಾಡಿದ ಸಚಿವ ಸುರೇಶ್ ಕುಮಾರ್, ಮಾರ್ಚ್ 27ಕ್ಕೆ ಪರೀಕ್ಷೆಗಳು ಆರಂಭವಾಗಬೇಕಿತ್ತು. ಚರ್ಚೆ, ಸಮಾಲೋಚನೆ, ಫೋನ್‌ಇನ್ ಎಲ್ಲಾ ಆಗಿದೆ. ಮಾಸ್ಕ್‌ಗಳನ್ನು ಕೊಡಲು ಸ್ಕೌಟ್ಸ್ ಮತ್ತು ಗೈಡ್ಸ್ ಮುಂದೆ ಬಂದಿದೆ. ಮೈಸೂರು ಜಿಲ್ಲೆಗೆ 42 ಸಾವಿರ ಮಾಸ್ಕ್ ಕೊಟ್ಟಿದ್ದಾರೆ.  ಪ್ರತಿ ಮಕ್ಕಳಿಗೆ 2 ಮಾಸ್ಕ್ ಸಿಗುತ್ತೆ, ಸ್ಯಾನಟೈಸರ್ ಕೂಡಾ  ನೀಡುತ್ತೇವೆ.  ರಾಜ್ಯದ 4000 ಸೆಂಟರ್‌ಗಳಲ್ಲೂ ಸ್ಯಾನಟೈಸರ್ ಇರುತ್ತೆ.  ಥರ್ಮಲ್ ಸ್ಕ್ಯಾನರ್ ಮಾಡಲು ಆರೋಗ್ಯ ಇಲಾಖೆ ತಂಡಗಳನ್ನು ನಿಯೋಜಿಸಲಾಗುವುದು. ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂ ಸೇವಕರನ್ನು ನಿಯೋಜಿಸುತ್ತೇವೆ.  ಹಿಂದೆ ಪ್ರತಿ ಹಾಲ್‌ನಲ್ಲಿ 24 ಜನ ಕೂರಿಸುತ್ತಿದ್ದೆವು.  ಆದ್ರೆ ಈ ವರ್ಷ 18  ವಿದ್ಯಾರ್ಥಿಗಳನ್ನು ಕೂರಿಸುತ್ತೇವೆ. ಬೆಂಚ್‌ಗಳ ನಡುವೆ ಸಾಮಾಜಿಕ  ಅಂತರ ಇರುತ್ತೆ. ಆರೋಗ್ಯದಲ್ಲಿ ಏರುಪೇರುಗಳಿದ್ದರೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡುತ್ತೇವೆ. ಪರೀಕ್ಷೆ ಮಿಸ್ ಆದರೆ ಜುಲೈ‌ನಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಫ್ರೆಶ್ ಕ್ಯಾಂಡಿಡೇಟ್ ಅಂತ ಪರಿಗಣಿಸುತ್ತೇವೆ. ವಲಸೆ ಕಾರ್ಮಿಕರ ಮಕ್ಕಳಿಗೆ ಸಮೀಪದ‌ ಸೆಂಟರ್‌ನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು. Education Minister -Suresh Kumar -information -t SSLC -exam -preparation.

ಮೈಸೂರಿನಲ್ಲಿ 139 ಪರೀಕ್ಷಾ ಕೇಂದ್ರಗಳಿವೆ. ಒಂದೂ ಸೆಂಟರ್ ನಲ್ಲೂ ಯಾವುದೇ ಕಂಟೈನ್ಮೆಂಟ್ ಜೋನ್ ಇಲ್ಲ. ಮಂಡ್ಯ ಹಾಗೂ ಮಡಿಕೇರಿಯಲ್ಲೂ ಸಹ ಯಾವುದೇ ಕಂಟೈನ್ಮೆಂಟ್ ಜೋನ್ ಇಲ್ಲ. ಮೈಸೂರಿನಲ್ಲಿ 39822ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಂಡ್ಯದಲ್ಲಿ 83, ಕೊಡಗಿನಲ್ಲಿ 27 ಪರೀಕ್ಷಾ ಕೇಂದ್ರಗಳಿವೆ.  ಮೂರು ಜಿಲ್ಲೆಗಳಿಂದ 248 ಪರೀಕ್ಷಾ ಕೇಂದ್ರಗಳಿವೆ.  ಸುರಕ್ಷತೆ ಮತ್ತು ಆತ್ಮವಿಶ್ವಾಸ ನಮ್ಮ ಧ್ಯೇಯವಾಗಿದೆ. ಅದಕ್ಕಾಗಿ ಮನೆ ಮನೆಗಳಿಗೆ ತಲುಪುವ ಕೆಲಸ ಮಾಡುತ್ತಿದ್ದೇವೆ.  ಕಲಿಕಾ ನಿರಂತರತೆ ಕಾಪಾಡಿಕೊಂಡಿದ್ದೇವೆ. ಈ ಕಾರಣಕ್ಕಾಗಿ ಪರೀಕ್ಷೆ ‌ಯಶಸ್ವಿಯಾಗುವ ವಿಶ್ವಾಸವಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಪರೀಕ್ಷೆ ನಡೆಸಲೇಬಾರದು ಎಂಬ ಅಭಿಪ್ರಾಯವಿದೆ. ಈ ಸಂಬಂಧ ಹೈಕೋರ್ಟ್‌ನಲ್ಲೂ ಪಿಎಎಲ್ ದಾಖಲಾಗಿತ್ತು. ಎಸ್‌ಎಸ್ಎಲ್‌ಸಿ ಜೀವನದ ಪ್ರಮುಖ ಘಟ್ಟ.  ಆದ್ದರಿಂದ ಪರೀಕ್ಷೆ ನಡೆಸಲೇಬೇಕಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.

Key words: Education Minister -Suresh Kumar -information -t SSLC -exam -preparation.