ಶಾಲೆ ಪುನಾರಂಭದ ಬಗ್ಗೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸುಳಿವು.

ಬೆಂಗಳೂರು,ಜನವರಿ,19,2022(www.justkannada.in): ರಾಜ್ಯದಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಶಾಲೆಗಳನ್ನ ಬಂದ್ ಮಾಡಲಾಗಿದ್ದು ಈ ನಡುವೆ ಶಾಲೆ ಪುನಾರಂಬದ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸುಳಿವು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಬಂದ್ ಆಗಿರುವ ಕಡೆ ಶಾಲೆ ಪುನಾರಂಭಕ್ಕೆ ಚಿಂತನೆ ನಡೆಸಲಾಗುತ್ತಿದೆ. ಸಿಎಂ ಸಭೆಯಲ್ಲಿ ಶಾಲೆ ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ.  ಪಾಸಿಟಿವ್ ಕೇಸ್ ಇರೋ ಕಡೆ ಶಾಲೆ ಬಂದ್ ಗೆ ಸೂಚನೆ ನೀಡಲಾಗಿದೆ. ಉಳಿದ ಕಡೆ ಶಾಲೆಗಳು ಇರಲಿವೆ.

ಶಾಲೆ ಬಂದ್ ಬೇಡ ಎಂದು ತಜ್ಞರು ಹೇಳಿದ್ದಾರೆ. ಕ್ಲಸ್ಟರ್ ಮಟ್ಟದಲ್ಲಿ ಶಾಲೆ ಬಂದ್ ಗೆ ತಜ್ಞರು ಸಲಹೆ ನೀಡಿದ್ದಾರೆ.  ರಾಜ್ಯಾದ್ಯಂತ ಶಾಲೆ ಬಂದ್ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಬಿಸಿ ನಾಗೇಶ್ ತಿಳಿಸಿದರು.

Key words: Education Minister -BC Nagesh -hints -reopening -school.

ENGLISH SUMMARY…

Education Minister B.C. Nagesh gives clue on reopening of schools
Bengaluru, January 19, 2022 (www.justkannada.in): The schools in the State have been closed due to the increase in the number of Corona cases. However, Primary and Secondary Education Minister B.C. Nagesh today hinted about the reopening of the schools.
“We are contemplating on reopening the schools where they have been closed now. A final decision about this will be taken in the meeting that will be held under the leadership of Chief Minister Basavaraj Bommai. However, instructions have been given to close the schools wherever positive cases exist. Other schools will run,” he explained.
He also informed that it is also the opinion of the experts not to close the schools. However, they have suggested closing the schools at the cluster level. “It is not possible to close the schools across the State,” he added.
Keywords: Primary and Secondary Education Minister/ B.C. Nagesh/ Schools/ reopening/ hints