ಈಕ್ವೆಡಾರ್- ಉತ್ತರ ಪೆರುವಿನ ಕರಾವಳಿ ಪ್ರದೇಶದಲ್ಲಿ 6.8 ತೀವ್ರತೆಯ ಭೂಕಂಪ

ಬೆಂಗಳೂರು, ಮಾರ್ಚ್ 19, 2023 (www.justkannada.in): ಈಕ್ವೆಡಾರ್ ಮತ್ತು ಉತ್ತರ ಪೆರುವಿನ ಕರಾವಳಿ ಪ್ರದೇಶದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ.

ಯುಎಸ್ ಜಿಯಲಾಜಿಕಲ್ ಸರ್ವೆ ಪ್ರಕಾರ, ಗುವಾಯಾಸ್ ಪ್ರಾಂತ್ಯದ ಬಾಲಾವೊ ನಗರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿ ಮತ್ತು ಭೂಮಿಯಿಂದ 66.4 ಕಿಮೀ ಆಳದಲ್ಲಿ ಸಂಭವಿಸಿದೆ.

6.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಘಟನೆಯಲ್ಲಿ 13 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಬಾಧಿತರಾದವರಿಗೆ ತಮ್ಮ ಎಲ್ಲಾ ಬೆಂಬಲವನ್ನು ನೀಡಲು ತುರ್ತು ತಂಡಗಳು ಸಜ್ಜುಗೊಳ್ಳುತ್ತಿವೆ ಎಂದು ಈಕ್ವೆಡಾರ್ ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.