Friday, July 31, 2026

BDA Apartments

Home Front Page ದೇಶದ ಆರ್ಥಿಕತೆ ಕುಸಿದಿಲ್ಲ-ಮೈಸೂರಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ…

ದೇಶದ ಆರ್ಥಿಕತೆ ಕುಸಿದಿಲ್ಲ-ಮೈಸೂರಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ…

ಮೈಸೂರು,ಆ,22,2019(www.justkannada.in): ವಿಶ್ವದಾದ್ಯಂತ ಆರ್ಥಿಕತೆ ಇಳಿಮುಖ ವಾಗಿದೆ,  ಭಾರತದಲ್ಲಿ ಹಣದುಬ್ಬರ  ಹಾಗೂ ಬೆಲೆ ಏರಿಕೆ ನಮ್ಮ ಕೈಯಲ್ಲಿಯೇ ಇದೆ. ದೇಶದ ಆರ್ಥಿಕತೆ ಕುಸಿದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ವಿವಿಧ  ಕ್ಷೇತ್ರಗಳ ಆರ್ಥಿಕವಾಗಿ ಇಳಿಮುಖ ಸಂಬಂಧಿಸಿದಂತೆ ಈಗಾಗಲೇ ಎರಡು -ಮೂರು ವಾರಗಳ ಮುಂಚೆ ವಿವಿಧ ಕ್ಷೇತ್ರಗಳ ಪರಿಣಿತರೊಂದಿಗೆ ಚರ್ಚೆ ನಡೆಸಲಾಗಿದೆ, ಪರಿಹಾರೋಪಾಯಗಳ  ಬಗ್ಗೆ  ಕ್ರಮ ಕೈಗೊಳ್ಳಲಾಗ್ತಿದೆ ಎಂದರು.

ನೆರೆಯ ದೇಶ ಚೀನಾದಲ್ಲೂ  ಆರ್ಥಿಕತೆ ಕೆಳಮುಖವಾಗಿದ್ದು  ಭಾರತಕ್ಕೆ ಹೋಲಿಕೆ ಮಾಡುವುದು ಸರಿಯಿಲ್ಲ.ಬಿಜೆಪಿಯ ಜಿ. ಎಸ್ ಟಿ ಹಾಗೂ ಆರ್ಥಿಕ ನೀತಿಗಳೇ ಅರ್ಥವ್ಯವಸ್ಥೆಗೆ ಮತ್ತು ಉದ್ಯೋಗ ಕುಸಿತಕ್ಕೆ ಕಾರಣ ಎನ್ನುವ ವಿರೋಧಪಕ್ಷಗಳ ಆರೋಪ ನಿರಾಧಾರ ಎಂದು ನಿರ್ಮಲ ಸೀತಾರಾಮನ್ ಹೇಳಿದರು.

Key words: economy – country – no decline- mysore-Union Finance Minister -Nirmala Sitharaman