ಸರ್ಕಾರಗಳಿಗೆ ಆರ್ಥಿಕ ಸಂಕಷ್ಟ ಇರೋದು ನಿಜ : ಡಿಸಿಎಂ ಡಾ.ಅಶ್ವಥ್ ನಾರಾಯಣ್

ಮೈಸೂರು,ಅಕ್ಟೋಬರ್,19,2020(www.justkannada.in) : ಸರ್ಕಾರಕ್ಕೆ ನಿರೀಕ್ಷಿತ ಪ್ರಮಾಣಕ್ಕೆ ಆದಾಯ ಬರ್ತಿಲ್ಲ. ಹೀಗಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟವಿದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಹೇಳಿದರು.

jk-logo-justkannada-logo

ಕಳೆದ ವರ್ಷ ಪ್ರವಾಹ ಆಗಿತ್ತು. ಕೋವಿಡ್ ನಿಂದ ಎಷ್ಟೆಲ್ಲಾ ತೊಂದರೆ ಯಾಗಿದೆ ಅನ್ನೊದು ಗೊತ್ತಿದೆ. ಸರ್ಕಾರಕ್ಕೆ ನಿರೀಕ್ಷಿತ ಪ್ರಮಾಣಕ್ಕೆ ಆದಾಯ ಬರ್ತಿಲ್ಲ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ  ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಹೇಳಿದರು.

ಹೀಗಾಗಿಯೂ, ಎಲ್ಲಾ ಸಮಸ್ಯೆಗಳನ್ನು ಜನಕ್ಕೆ ತೊಂದರೆಯಾಗದ ರೀತಿಯಲ್ಲಿ ನಿಭಾಯಿಸುತ್ತಿದ್ದೇವೆ. ಎನ್.ಡಿ.ಆರ್.ಎಫ್ ನಿಯಮಗಳ ಪ್ರಕಾರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ವಿತರಣೆ ಆಗುತ್ತಿದೆ ಎಂದರು.

Economic-hardship-governments-real-DCM Dr. Ashwath Narayan

ಯಾವ ಸಂತ್ರಸ್ತರಿಗೂ ಪರಿಹಾರ ಸಿಕ್ಕಿಲ್ಲ ಎಂದು ಹೇಳುವಂತಿಲ್ಲ

ಯಾವ ಸಂತ್ರಸ್ತರಿಗೂ ಪರಿಹಾರ ಸಿಕ್ಕಿಲ್ಲ ಎಂದು ಹೇಳುವಂತಿಲ್ಲ. ಕೆಲ ಸಚಿವರು ವ್ಯಯಕ್ತಿಕ ಸಮಸ್ಯೆಗಳಿಂದಾಗಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿಲ್ಲ. ಆದರೆ, ಸರ್ಕಾರ ಈ ನಿಟ್ಟಿನಲ್ಲಿ ಜಾಗರೂಕತೆಯಿಂದ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

key words : Economic-hardship-governments-real-DCM Dr. Ashwath Narayan