ಮಾಂಸ ತಿಂದು ದೇಗುಲಕ್ಕೆ ತೆರಳಿದ ವಿಚಾರ: ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಸಚಿವ ಸುನೀಲ್ ಕುಮಾರ್ ಕಿಡಿ.

ಕಲ್ಬುರ್ಗಿ,ಆಗಸ್ಟ್,22,2022(www.justkannada.in): ಮಾಂಸ ತಿಂದು ದೇಗುಲಕ್ಕೆ ತೆರಳಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಇಂಧನ ಸಚಿವ ಸುನೀಲ್ ಕುಮಾರ್ ಕಿಡಿ ಕಾರಿದ್ಧಾರೆ.

ಈ ಕುರಿತು ಕಲ್ಬರ್ಗಿಯಲ್ಲಿ ಮಾತನಾಡಿದ ಸಚಿವ ಸುನೀಲ್ ಕುಮಾರ್, ದೇವಸ್ಥಾನಕ್ಕೆ ಹೋಗೋದು ಅವರವರ ಭಾವನೆಗೆ ಬಿಟ್ಟಿದ್ದು,  ಮಾಂಸ ತಿಂದು ಹೋಗಬಾರದು ಎಂಬುದು ಅನೇಕರ ಭಾವನೆ. ಆದರೆ ಸಿದ್ಧರಾಮಯ್ಯ ಭಾವನೆ ಏನಿದೆ ಗೊತ್ತಿಲ್ಲ. ಸಿದ್ಧರಾಮಯ್ಯಗೆ ಆದರ್ಶ ಗುಣ ಇಲ್ಲ.  ಸಿದ್ದರಾಮಯ್ಯ ಬಳಿ ಕಲಿಯುವಂತಹದ್ದು ಏನಿದೆ. ಅವರು ಬರೀ ಸುಳ್ಳು ಹೇಳುತ್ತಾರೆ.  ಪ್ರತಿ ಭಾರಿ ಸಮಾಜ ವಿರೋಧಿ ಹೇಳಿಕೆ ನೀಡುತ್ತಾರೆ.  ಜಾತಿ ವಿಷಬೀಜ ಬಿತ್ತುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಸಿದ್ಧರಾಮಯ್ಯ ಅವರಿಂದ ಯುವ ರಾಜಕಾರಣಿಗಳು ಕಲಿಯುವಂತಹದ್ದು ಏನು ಇಲ್ಲ. ಸಿದ್ಧರಾಮಯ್ಯ ಹೇಳುವುದು ಒಂದು ಮಾಡುವುದು ಿನ್ನೊಂದು. ವಿವಾದಗಳನ್ನ ಎಳೆದು ತಂದವರೆ ಸಿದ್ದರಾಮಯ್ಯ, ವಿವಾದದಿಂದ ಜನರ ದಿಕ್ಕು ತಪ್ಪಿಸುವ ಉದ್ಧೇಶ ಎಂದು ಸಚಿವ ಸುನೀಲ್ ಕುಮಾರ್ ಹರಿಹಾಯ್ದರು.

Key words: eating -meat – temple-Former CM- Siddaramaiah- Minister -Sunil Kumar.