ಬೆಂಗಳೂರಿನಲ್ಲಿ ಹಲವೆಡೆ ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವ.

ಬೆಂಗಳೂರು,ನವೆಂಬರ್,26,2021(www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜರಾಜೇಶ್ವರಿ ನಗರ, ಕೆಂಗೇರಿ, ಕಗ್ಗಲೀಪುರ, ಹೆಣ್ಣೇಪುರದಲ್ಲಿ ಭೂಮಿ ಕಂಪಿಸಿರುವ ಅನುಭವವಾಗಿದೆ. ರಾಜರಾಜೇಶ್ವರಿ ನಗರ ಕೇಂಗೇರೆಇ ನಗರದ ಹಲವೆಡೆ ಭೂಮಿ ಕಂಪಿಸಿದ ಅನುಭವ ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಜ್ಞಾನಭಾರತಿ, ಮೈಸೂರು ರಸ್ತೆಯ ಕೆಲ ಏರಿಯಾಗಳಲ್ಲಿ ಭೂಮಿ ಕಂಪಸಿದ ಅನುಭವವಾಗಿದೆ.

ಎರಡು ಸಲ ಭೂಮಿ ಕಂಪಿಸಿದ ಅನುಭವವಾಗಿದೆ. ಮೊದಲ ಸಲ ಲಘುವಾಗಿ ಕಂಪಿಸಿದ ಅನುಭವವಾಗಿದ್ದು, ನಂತರ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ. 2 ನಿಮಿಷಗಳ ಕಾಲ ಭಾರಿ ಶಬ್ದ ಕೇಳಿ ಜನರು ಬೆಚ್ಚಿಬಿದ್ದಿದ್ದು, ಭಾರಿ ಶಬ್ದಕ್ಕೆ ಕಿಟಕಿ ಬಾಗಿಲು ಅಲುಗಾಡಿದೆ. ಮಂಡ್ಯದಲ್ಲೂ ಸುಮಾರು ಬೆಳಿಗ್ಗೆ 11.50ರಲ್ಲಿ ಭಾರಿಶಭ್ದವಾಗಿದ್ದು, ಜನರು ಬೆಚ್ಚುಬಿದ್ದಿದ್ದಾರೆ ಎನ್ನಲಾಗಿದೆ.

Key words: earth- Earthquake-many- places – Bangalore.