ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಕೇಸ್: ಬಿ ರಿಪೋರ್ಟ್ ತಿರಸ್ಕಾರ: ಮಾಜಿ ಸಚಿವ ಕೆ.ಜೆ ಜಾರ್ಜ್ ಗೆ ಮತ್ತೆ ಸಂಕಷ್ಟ…..

ಬೆಂಗಳೂರು, ಆಗಸ್ಟ್, 28, 2020(www.justkannada.in) ;  ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಸಿಬಿಐ ಸಲ್ಲಿಸಿದ್ದ ಬಿ.ರಿಪೋರ್ಟ್ ವರದಿಯನ್ನು ತಿರಸ್ಕರಿಸಿದ್ದು, ಮೂವರಿಗೆ ವಿಶೇಷ ನ್ಯಾಯಾಲಯವು ಕೋರ್ಟ್ ಗೆ ಹಾಜರಾಗುವಂತೆ ಸೂಚನೆ ನೀಡಿದೆ.

jk-logo-justkannada-logo

ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಆತ್ಮಹತ್ಯೆಗೆ ಪ್ರಚೋದನೆ ನೀಡಿಲ್ಲ ಎಂದು ಆರೋಪಿಗಳಿಗೆ ಕ್ಲೀನ್ ಚೀಟ್ ನೀಡಿ ಸಿಬಿಐ ಬಿ.ರಿಪೋರ್ಟ್ ಸಲ್ಲಿಸಿತ್ತು. ಬಿ.ರಿಪೋರ್ಟ್ ಪ್ರಶ್ನಿಸಿ ಡಿವೈ ಎಸ್ ಪಿ ಗಣಪತಿ ಪುತ್ರ ನಿಹಾಲ್ ಕೋರ್ಟ್ ಗೆ ಅರ್ಜಿ ಹಾಕಿದ್ದರು. ಅದರ ಅನ್ವಯ ವಿಶೇಷ ನ್ಯಾಯಾಲಯವು  ಸಿಬಿಐ ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನ ತಿರಸ್ಕರಿಸಿದೆ.

ಎ.ಎಂ.ಪ್ರಸಾದ್, ಪ್ರಣವ್ ಮೊಹಂತಿ, ಮಾಜಿ ಸಚಿವ ಕೆ.ಜೆ.ಜಾರ್ಜ್ ಗೆ ಕೋರ್ಟ್ ಗೆ ಹಾಜರಾಗುವಂತೆ ಸೂಚನೆ ನೀಡಿದ್ದು, ವಿಚಾರಣೆಯನ್ನು ಸೆ.26ಕ್ಕೆ ಮುಂದೂಡಲಾಗಿದೆ.

key words : DYSP Ganapathi-Suicide-related-Supreme-Court-Note?