ದಸರಾ ಸ್ಪೆಷಲ್: ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯಿಂದ ಹೆಚ್ಚುವರಿ ಬೋಗಿ ಅಳವಡಿಕೆ

ಬೆಂಗಳೂರು, ಅಕ್ಟೋಬರ್ 10, 2021 (www.justkannada.in): ದಸರಾ ಅಂಗವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ಹಲವು ರೈಲುಗಳಿಗೆ ಹೆಚ್ಚುವರಿಯಾಗಿ ಎರಡು ಬೋಗಿಗಳನ್ನು ಜೋಡಿಸುತ್ತಿದೆ.

ಮೈಸೂರು-ಹುಬ್ಬಳ್ಳಿ (ರೈಲು ಸಂಖ್ಯೆ 06582), ಮೈಸೂರು-ಸೊಲ್ಲಾಪುರ (06535), ಮೈಸೂರು-ಶಿವಮೊಗ್ಗ (06227) ಹಾಗೂ ಬೆಂಗಳೂರು-ಹುಬ್ಬಳ್ಳಿ (06241) ರೈಲುಗಳಿಗೆ ಅ.13 ಹಾಗೂ 14 ರಂದು ಹೆಚ್ಚುವರಿ ಬೋಗಿಗಳಿರಲಿವೆ.

ಹುಬ್ಬಳ್ಳಿ-ಮೈಸೂರು (96581), ಹುಬ್ಬಳ್ಳಿ-ಬೆಂಗಳೂರು (06242) ಅ.17 ರಂದು, ಬೆಂಗಳೂರು-ಮೀರಜ್‌ (06589), ಬೆಂಗಳೂರು-ಬೆಳಗಾವಿ (06549) ಅ.13 ರಿಂದ 16ರವರೆಗೆ, ಮೀರಜ್‌-ಬೆಂಗಳೂರು (06590), ಬೆಳಗಾವಿ-ಬೆಂಗಳೂರು (06550) ಅ.14 ರಿಂದ 17ರವರೆಗೆ, ಬೆಂಗಳೂರು-ಹುಬ್ಬಳ್ಳಿ (02079), ಹುಬ್ಬಳ್ಳಿ-ಬೆಂಗಳೂರು (02080) ಅ.13 ರಿಂದ 17ರವರೆಗೆ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗಿದೆ.

key words: Dussehra Special: Extra bogey from Southwest Railway for passenger convenience