ಎಚ್ಚೆತ್ತ ಮೈಸೂರು ಪೊಲೀಸರು: ಕೆಮಿಕಲ್ ತಯಾರಿಕಾ ಘಟಕಗಳ ಮೇಲೆ ದಾಳಿ, ಪರಿಶೀಲನೆ

ಮೈಸೂರು,ಜನವರಿ,30,2026 (www.justkannada.in):  ಮೈಸೂರಿನ ಹೆಬ್ಬಾಳದಲ್ಲಿ ಡ್ರಗ್ಸ್ ತಯಾರಿಕೆ ಅನುಮಾನದ ಮೇಲೆ ಎನ್ ಸಿಬಿ ಅಧಿಕಾರಿಗಳ ದಾಳಿ ಬೆನ್ನಲ್ಲೆ ಎಚ್ಚೆತ್ತುಕೊಂಡ ಮೈಸೂರು ಪೊಲೀಸರು ನಗರಾದ್ಯಂತ ತಪಾಸಣೆಗಿಳಿದಿದ್ದಾರೆ.

ಹೌದು, ಮಹಾರಾಷ್ಟ್ರ, NCB ಪೊಲೀಸರ ದಾಳಿ ಬಳಿಕ ಎತ್ತೆಚ್ಚ ಮೈಸೂರು ಪೊಲೀಸರು ನಗರದ ಫಿನಾಯಿಲ್ ಡಿಟರ್ಜೆಂಟ್ ಕೈಗಾರಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಹೆಬ್ಬಾಳದಲ್ಲಿ ಶ್ವಾನ ದಳದಿಂದ ಪರಿಶೀಲನೆ ನಡೆಸಿದ್ದಾರೆ.

ಮೈಸೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯ ಕೆಮಿಕಲ್ ತಯಾರಿಕಾ ಘಟಕಗಳ  ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.  ಮೈಸೂರು  ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ತಲಾಶ್ ನಡೆಸಲಾಗಿದ್ದು  ಇನ್ಸ್ ಪೆಕ್ಟರ್ ಶೇಖರ್, ಬಾಂಬ್ ಪತ್ತೆದಳ, ಶ್ವಾನದಳದಿಂದ ಪರಿಶೀಲನೆ ನಡೆಸಲಾಗಿದೆ.

ಆರೋಪಿ ರಾಜಸ್ಥಾನಕ್ಕೆ ಕರೆದೊಯ್ದ ಎನ್ ಸಿಬಿ ಪೊಲೀಸರು

ಮೈಸೂರಲ್ಲಿ ಮಾದಕ‌ ವಸ್ತು ಮಾರಾಟ ಆರೋಪದ ಮೇಲೆ  ಆಲನಹಳ್ಳಿ ನಿವಾಸಿ ಗಣಪತ್ ಲಾಲ್  ಎಂಬ ಆರೋಪಿಯನ್ನ ಎನ್ ಸಿಬಿ ಪೊಲೀಸರು ರಾಜಸ್ಥಾನಕ್ಕೆ ಕರೆದೊಯ್ದಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಟ್ರಾವೆಲ್ ವಾರೆಂಟ್ ಮೂಲಕ ತೆರಳಿದ್ದಾರೆ.

ಮಾದಕ‌ ವಸ್ತು ಮಾರಾಟ  ಸಂಬಂಧ ಮನೋಹರ್ ಬಿಷ್ಣೋಯಿ ಎಂಬಾತನ ಬಂಧನವಾಗಿತ್ತು. ಗಣಪತಿ‌ಲಾಲ್ ಬಂಧಿತನ ಸಂಬಂಧಿಯಾಗಿದ್ದು, ಈ ಹಿನ್ನೆಲೆಯಲ್ಲಿ ಹೆಬ್ಬಾಳದ ಟುಕು ಟುಕು ಹೌಸ್ ಹೋಲ್ಡ್ ಕೆಮಿಕಲ್ಸ್ ಪ್ರೊಡಕ್ಷನ್ ಸಲ್ಯೂಷನ್ ಮ್ಯಾನಿಫ್ಯಾಕ್ಚರಿಂಗ್ ಘಟಕದ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿದ್ದರು.

Key words: Drugs, Mysore Police, raided, Chemical manufacturing units