ಡ್ರಗ್ಸ್ ಸೇವಿಸುವ ಕಲಾವಿದರನ್ನು ಫಾಲೋ ಮಾಡಿದ್ರೆ ಮಾರಕ- ಸಚಿವ ಬಿ.ಸಿ ಪಾಟೀಲ್

ಕಲ್ಬುರ್ಗಿ,ಸೆಪ್ಟಂಬರ್,2020(www.justkannada.in):  ಡ್ರಗ್ಸ್ ದಂಧೆ ಎಲ್ಲಾ ರಂಗದಲ್ಲೂ ಇದೆ. ಆದರೇ ಚಿತ್ರರಂಗದಲ್ಲಿ ಅದು ಎದ್ಧು ಕಾಣುತ್ತದೆ. ಡ್ರಗ್ಸ್ ಸೇವಿಸುವ ಕಲಾವಿದರನ್ನು ಫಾಲೋ ಮಾಡಿದರೇ ಅದು ಮಾರಕ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ.jk-logo-justkannada-logo

ಕಲ್ಬುರ್ಗಿಯಲ್ಲಿ ಇಂದು ಮಾತನಾಡಿದ ಕೃಷಿ ಸಚಿವ ಬಿ.ಸಿ ಪಾಟೀಲ್, ಈ ಹಿಂದೆ ಚಿತ್ರರಂಗದಲ್ಲಿ ಯಾರೂ ಸಹ ಡ್ರಗ್ಸ್ ಸೇವಿಸುತ್ತಿರಲಿಲ್ಲ. ಆದರೆ ಇತ್ತೀಚೆಗೆ ಯುವಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ. ಡ್ರಗ್ಸ್ ನಂತಹ ದುಶ್ಚಟಗಳಿಗೆ ಬಲಿಯಾಗುವ ಮೂಲಕ ತಮ್ಮ ಆರೋಗ್ಯದ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಸಹ ಹಾಳು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಾವು ಚಿತ್ರರಂಗದಲ್ಲಿದ್ದಾಗ ಕ್ಯಾಮರಾಗೆ ನಮಸ್ಕಾರ ಮಾಡುತ್ತಿದ್ದವು. ಈಗ ಹಾಯ್ ಬಾಯ್ ಸಂಸ್ಕೃತಿ ಬಂದಿದೆ. ಡ್ರಗ್ಸ್ ದಂಧೆ ಎಲ್ಲಾ ರಂಗದಲ್ಲೂ ಇದೆ. ಆದರೆ ಚಿತ್ರರಂಗದಲ್ಲಿ ಮಾತ್ರ ಎದ್ದು ಕಾಣುತ್ತದೆ. ಗಾಜಿನ ಮನೆಯಲ್ಲಿರುವವರ  ಮೇಲೆ ಜನರ ಕಣ್ಣು ಇರುತ್ತದೆ. ಹಿಂದಿನಂತಹ ಸಂಸ್ಕೃತಿ ಈಗ ಚಿತ್ರರಂಗದಲ್ಲಿ ಕಾಣಲಾಗುತ್ತಿಲ್ಲ. ಎಂದಿಗೂ ನಮ್ಮ ಸಂಸ್ಕೃತಿ ಪಾವಿತ್ರ್ಯತೆಯನ್ನು ಕೈಬಿಡಬಾರದು ಎಂದು ಕಿವಿಮಾತು ಹೇಳಿದರು.Drugs - artists - fatal - Minister –BC Patil-kalburgi

ಇನ್ನು ಡ್ರಗ್ಸ್ ಪೆಡ್ಲರ್ ಜತೆ ಶಾಸಕ ಜಮೀರ್ ಅಹ್ಮದ್ ಖಾನ್ ಸಂಪರ್ಕದಲ್ಲಿದ್ದರೇ ಅವರ ವಿರುದ್ದ ಕ್ರಮ ಕೈಗೊಳ್ಳಲಿ ಎಂದು ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ.

Key words: Drugs – artists – fatal – Minister –BC Patil-kalburgi