ಡ್ರಗ್ ಮಾಫಿಯಾ ಪ್ರಕರಣ: ಸಂಜನಾ ಆಪ್ತೆ ಪೃಥ್ವಿ ಶೆಟ್ಟಿ ಬಂಧನ

ಬೆಂಗಳೂರು, ಸೆಪ್ಟೆಂಬರ್ 11, 2020 (www.justkannada.in): ಡ್ರಗ್ ಮಾಫಿಯಾ ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾನಿ ಆಪ್ತೆ ಪೃಥ‍್ವಿ ಶೆಟ್ಟಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಿಸಿಬಿ ಪೊಲೀಸರು ಈ ಮೊದಲು ಪೃಥ್ವಿ ಶೆಟ್ಟಿಯನ್ನು ವಿಚಾರಣೆ ಮಾಡಿ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದರು.

ಸಂಜನಾ ಬಗ್ಗೆ ಕ್ಲೂ ನೀಡಿದ್ದೇ ಪೃಥ್ವಿ ಶೆಟ್ಟಿ ಎನ್ನಲಾಗಿತ್ತು. ಇದೀಗ ಹೆಚ್ಚಿನ ವಿಚಾರಣೆಗಾಗಿ ಆಕೆಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಇನ್ನಷ್ಟು ಮಾಹಿತಿ ಪಡೆಯಲಿದ್ದಾರೆ.