ನಟ ಶಾರುಖ್ ಖಾನ್ ಪುತ್ರ ಆರ್ಯನ್  ಸೇರಿ 8 ಜನರಿಗೆ ನ್ಯಾಯಾಂಗ ಬಂಧನ ವಿಸ್ತರಣೆ.

ಮುಂಬೈ,ಅಕ್ಟೋಬರ್,21,2021(www.justkannada.in):  ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್  ಸೇರಿ 8 ಆರೋಪಿಗಳಿಗೆ  ವಿಧಿಸಿರುವ ನ್ಯಾಯಂಗ ಬಂಧನದ ಅವಧಿಯನ್ನು ಕೋರ್ಟ್ ವಿಸ್ತರಣೆ ಮಾಡಿದೆ.

ನಿನ್ನೆಯಷ್ಟೇ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಲ್ಲಿಸಿದ್ಧ ಜಾಮೀನು ಅರ್ಜಿಯನ್ನ ಮುಂಬೈನ ಎನ್ ಡಿ ಪಿಎಸ್ ವಿಶೇಷ ಕೋರ್ಟ್  ವಜಾಗೊಳಿಸಿತ್ತು. ಇದೀಗ ಆರ್ಯನ್ ಖಾನ್ ಸೇರಿ 8 ಮಂದಿ ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನ ಅಕ್ಟೋಬರ್ 30ರವರೆಗೆ ವಿಸ್ತರಿಸಲಾಗಿದೆ. ಈ ಮೂಲಕ ಅಕ್ಟೋಬರ್ 30ರವರೆಗೆ ಆರ್ಯನ್ ಖಾನ್ ಗೆ ಜೈಲೇ ಗತಿ ಎನ್ನುವಂತಾಗಿದೆ.

ಈ ಮಧ್ಯೆ ಬೆಳಿಗ್ಗೆ ನಟ ಶಾರೂಖ್ ಖಾನ್ ಜೈಲಿನಲ್ಲಿರುವ ಪುತ್ರ ಆರ್ಯನ್ ಖಾನ್ ನನ್ನ  ಭೇಟಿಯಾಗಿ ಮಾತನಾಡಿದ್ದರು. ಇದಾದ ನಂತರ ಶಾರುಖ್ ಖಾನ್ ನಿವಾಸದ ಮೇಲೆ ಎನ್ ಸಿ ಬಿ ಅಧಿಕಾರಿಗಳು ದಾಳಿ ನಡೆಸಿದ್ದರು.

Key words: drug case-Judicial custody- extended – Aryan