ಈಗಾಗಲೇ ಬರ ಕಾಮಗಾರಿ ಆರಂಭ: ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ- ಸಿಎಂ ಸಿದ್ಧರಾಮಯ್ಯ.

ಮೈಸೂರು,ಅಕ್ಟೋಬರ್,24,2023(www.justkannada.in):  ರಾಜ್ಯದಲ್ಲಿ ಈಗಾಗಲೇ ಬರ ಕಾಮಗಾರಿ ಆರಂಭವಾಗಿದ್ದು ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ‍್ಧರಾಮಯ್ಯ, ಜಾನುವಾರುಗಳಿಗೆ  ಕುಡಿಯುವ ನೀರು ಮೇವು ಪೂರೈಸುವ ಕೆಲಸ ನಡೆಯತ್ತಿದೆ.  ಎಷ್ಟೇ ಹಣ ಖರ್ಚಾದರೂ ಕುಡಿಯುವ ನೀರಿಗೆ ಸಮಸ್ಯಯಾಗಬಾರದು ಸಮಸ್ಯೆ ಆಗದಂತೆ ಕ್ರಮ ವಹಿಸಲು ಸೂಚನೆ ನೀಡಿದ್ದೇನೆ. ದನಕರುಗಳ ಮೇವಿಗೆ ಸಮಸ್ಯೆ ಇಲ್ಲ ಸಾಕಷ್ಟು ದಾಸ್ತಾನು ಇದೆ. ಬರಗಾಲದಲ್ಲಿ ಜನ ಜಾನುವಾರುಗಳಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಮೈಸೂರನ ಮಹಾರಾಣಿ ಕಾಲೇಜು ಅಭಿವೃದ್ಧಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ‍್ಧರಾಮಯ್ಯ, ಹಿಂದಿನ ಸರ್ಕಾರದಲ್ಲಿ ಮೈಸೂರಿಗೆ ಒಂದೇ ಒಂದು ಕೆಲಸ ಮಾಡಿಲ್ಲ ಈಗಾಗಲೇ ಕಾಲೇಜು ಕಟ್ಟಡ ಬಿದ್ದು ಹೊಗುತ್ತಿದೆ. ಅಭಿವೃದ್ದಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Key words:  drought work – already –started-mysore-CM Siddaramaiah.