ಕೈಕೊಟ್ಟ ಮುಂಗಾರು: ಕಬಿನಿ ಜಲಾನಯನ ಪ್ರದೇಶಗಳಲ್ಲಿ ಬರ ಸಾದ್ಯತೆ…

ಮೈಸೂರು,ಜು,4,2019(www.justkannada.in): ಮುಂಗಾರು ಮಳೆ ಕೈಕೊಟ್ಟ ಹಿನ್ನಲೆ ಜಲಾಶಯಗಳಲ್ಲಿ ನೀರಿಗೆ ಬರ ಉಂಟಾಗಿದ್ದು, ಈ ನಡುವೆ ರಾಜ್ಯದಲ್ಲಿಯೇ ಮೊಟ್ಟಮೊದಲು ತುಂಬುವ ಜಲಾಶಯ ಎಂಬ ಹೆಗ್ಗಳಿಕೆ ಪಡೆದಿರುವ ಕಬಿನಿ ಜಲಾಶಯದ ಪ್ರದೇಶಗಳಲ್ಲಿ ಬರ ಆವರಿಸುವ ಸಾಧ್ಯತೆ ಇದೆ.

ಎಚ್ ಡಿ ಕೋಟೆಯ  ಬೀಚನಹಳ್ಳಿಯಲ್ಲಿರುವ ಕಬಿನಿ  ಜಲಾಶಯ ಕಳೆದ ವರ್ಷ ಇದೇ ದಿನದಂದು 2282.ಅಡಿ ನೀರು ಸಂಗ್ರಹ ವಾಗಿತ್ತು. ಇಂದು 2257.97 ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಕೇರಳದಲ್ಲಿ ವೈನಾಡಿನಲ್ಲಿ ಉತ್ತಮ ಮಳೆಯಾಗದ ಕಾರಣ ಒಳಹರಿವಿನಲ್ಲಿ ಇಳಿಕೆಯಾಗಿದ್ದು ಕಬಿನಿ ಜಲಾನಯನ ಪ್ರದೇಶದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.

ಕಳೆದ ವರ್ಷ ಜೂನ್ ನಲ್ಲಿ ವೇಳೆಗೆ 20 ರಿಂದ 80 ಸಾವಿರ ಕ್ಯೂಸೆಕ್ ಒಳ ಹರಿವಿನ ಪ್ರಮಾಣವಿತ್ತು. ಈ ಬಾರಿ ಜೂನ್ ನಲ್ಲಿ ಒಳಹರಿವು ಕೇವಲ  500 ಕ್ಯೂಸೆಕ್ ನಿಂದ 1700 ಕ್ಯೂಸೆಕ್ ಮಾತ್ರ ಇದೆ. ಮಳೆಯಾಗದೇ ಕಬಿನಿ ಒಡಲು ಬರಿದಾದರೆ ಮಹಾನಗರಗಳಿಗೂ ಕುಡಿಯುವ ನೀರಿಗೂ ಬರ ಆವರಿಸೋ ಸಾಧ್ಯತೆ ಇದೆ.

Key words: Drought -Kabini dam- hd kote-water