156 ತಾಲೂಕಲ್ಲಿ ಬರ ನೀರಿಗಾಗಿ ಹಾಹಾಕಾರ

ಬೆಂಗಳೂರು:ಮೇ-17: ಪ್ರತಿವರ್ಷದಂತೆ ಈ ಸಲವೂ ರಾಜ್ಯವನ್ನು ಭೀಕರ ಬರ ಆವರಿಸಿದ್ದು, ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. 2018-19ನೇ ಸಾಲಿನಲ್ಲಿ ಮುಂಗಾರಿನಲ್ಲಿ 100, ಹಿಂಗಾರಿನಲ್ಲಿ 156 ಸೇರಿ ಒಟ್ಟು 156 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ರಾಜ್ಯ
ಸರ್ಕಾರ ಘೋಷಿಸಿದೆ.

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬರ ನಿರ್ವಹಣೆಯ ಕಾಮಗಾರಿಗಳಿಗೆ ತುಸು ತೊಂದರೆಯಾದರೂ,ಚುನಾವಣಾ ಆಯೋಗದ ಅನುಮತಿ ಪಡೆದು ಸರ್ಕಾರ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಿದೆ. ಆದರೂ, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಸರಕಾರದ ಪರಿಹಾರ ಕಾಮಗಾರಿಗಳು ಜನತೆಯ ಸಂಕಷ್ಟ ನೀಗಿಸುವಲ್ಲಿ ಸಫ‌ಲವಾಗುತ್ತಿಲ್ಲ ಎಂಬುದು ಜನರ ಅಳಲು. ರಾಜ್ಯದಲ್ಲಿನ ಬರದ ಪ್ರಸ್ತುತ ಪರಿಸ್ಥಿತಿ ಬಗ್ಗೆ ವಾಸ್ತವಿಕ ಅಂಶ ತೆರೆದಿಡುವ ಪ್ರಯತ್ನ ಇದು.

ರಾಮನಗರ
22 ಮಿ.ಮೀ.ಮಳೆ ಕೊರತೆ
– ಕನಕಪುರ, ರಾಮನಗರ, ಚನ್ನಪಟ್ಟಣ ಮತ್ತು ಮಾಗಡಿ ತಾಲೂಕುಗಳು ಬರ ಪೀಡಿತ.
– ಜಿಲ್ಲೆಯಲ್ಲಿ ಮಳೆ ಪ್ರಮಾಣ ವಾಡಿಕೆಗಿಂತ 22 ಮಿ.ಮಿ.ನಷ್ಟು ಕಡಿಮೆ. ಕೇವಲ ಶೇ 0.75ರಷ್ಟು ಬಿತ್ತನೆಯಾಗಿದ್ದು, 10 ವಾರಗಳಿಗಾಗುವಷ್ಟು ಒಣ ಮೇವು, 16 ವಾರಗಳಿಗಾಗುವಷ್ಟು ಹಸಿರು ಮೇವಿನ ದಾಸ್ತಾನಿದೆ. 3,10,406 ಜಾನುವಾರುಗಳಿವೆ.
– ಕುಡಿಯುವ ನೀರಿಗಾಗಿ 1026.76 ಲಕ್ಷ, ಬರ ನಿರ್ವಹಣೆಗಾಗಿ 1151.47 ಲಕ್ಷ ರೂ.ವ್ಯಯಿಸಲಾಗಿದೆ. ಕನಕಪುರ, ಮಾಗಡಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ನೀರು ಶೇಖರಿಸಿ ಟ್ಯಾಂಕರ್‌
ಮೂಲಕ ಪೂರೈಕೆ ಮಾಡಲಾಗುತ್ತಿದೆ.

ಹಾಸನ
ಎಲ್ಲಾ ತಾಲೂಕುಗಳೂ ಬರಪೀಡಿತ
– ಜಿಲ್ಲೆಯ ಎಲ್ಲಾ 8 ತಾಲೂಕುಗಳೂ ಬರಪೀಡಿತ.
– ಜಿಲ್ಲೆಯ 26 ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ, 47 ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್‌ಗ‌ಳಿಂದ ಕುಡಿಯುವ ನೀರು ಪೂರೈಕೆ.
– ಪೂರ್ವ ಮುಂಗಾರಿನಲ್ಲಿ ವಾಡಿಕೆಗಿಂತ ಶೇ.47ರಷ್ಟು ಕೊರತೆ.
– ಅರಸೀಕೆರೆ ತಾಲೂಕಿನ 26 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಕಂಡು ಬಂದಿದೆ.
– ತುರ್ತು ಕುಡಿಯುವ ನೀರು, ಜಾನುವಾರುಗಳಿಗೆ 37 ಕೋಟಿ ರೂ.ಬಿಡುಗಡೆ.
– ಜಿಲ್ಲೆಯಲ್ಲಿ 7,47,724 ಜಾನುವಾರುಗಳಿದ್ದು, 3,38,303 ಮೆಟ್ರಿಕ್‌ ಟನ್‌ ಮೇವು ಲಭ್ಯ. 13 ವಾರಗಳವರೆಗೆ ಸಾಕು

ಕೋಲಾರ
ಕುಡಿಯಲು ಟ್ಯಾಂಕರ್‌ ನೀರೇ ಗತಿ
– ಜಿಲ್ಲೆಯ ಬಹುತೇಕ ಕೆರೆ ಕುಂಟೆಗ ಳು ಬತ್ತಿ ಬರಿದು. ಕೊಳವೆ ಬಾವಿಗಳಲ್ಲೂ ನೀರಿಲ್ಲ. ಅಂತರ್ಜಲ ಅಪಾಯಕಾರಿ ಮಟ್ಟಕ್ಕಿಳಿದಿದ್ದು, 1500 ಅಡಿ ಆಳಕ್ಕಿಂ ತಲೂ ಮೇಲ್ಭಾಗದಲ್ಲಿ ನೀರು ಸಿಗುತ್ತಿಲ್ಲ.
– 2019ರ ಮಾರ್ಚ್‌ನಿಂದ 213 ಕೊಳವೆ ಬಾವಿ ಕೊರೆದಿದ್ದು, 136ರಲ್ಲಿ ಮಾತ್ರ ನೀರು ಲಭ್ಯವಾಗಿದೆ.
– ಜಿಲ್ಲೆಯ 113 ಗ್ರಾಮಗಳು ನಿತ್ಯ74 ಟ್ಯಾಂಕರ್‌ಗಳ ಮೂಲಕ
198 ಟ್ರಿಪ್‌ ನೀರು ಪೂರೈಕೆ. 39 ಖಾಸಗಿ ಕೊಳವೆ ಬಾವಿಗಳಿಂದ ನೀರು
ಖರೀದಿ. ಟ್ಯಾಂಕರ್‌ ನೀರು ಪೂರೈಕೆಗೆ 1.76 ಕೋಟಿ, ಹೊಸ ಕೊಳವೆ ಬಾವಿಗೆ ಪೈಪ್‌ಲೈನ್‌ ಅಳವಡಿಕೆಗೆ 2 ಕೋಟಿ ರೂ.ವೆಚ್ಚ. ಜಿ.ಪಂ.ಗೆ ನೀರು
ಸರಬರಾಜಿಗಾಗಿ 38 ಕೋಟಿ, ನಗರ ಪ್ರದೇಶಕ್ಕೆ 4 ಕೋಟಿ,
ಗ್ರಾಮಾಂತರಕ್ಕೆ 7.5 ಕೋಟಿ ರೂ.ಅನುದಾನ ಬಿಡುಗಡೆ.

ತುಮಕೂರು
ಕಲ್ಪತರು ನಾಡಲ್ಲಿ ನೀರಿಗೆ ಹಾಹಾಕಾರ
– 122 ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು.ನಗರ, ಪಟ್ಟಣ ಪ್ರದೇಶಗಳಲ್ಲಿ ತಿಂಗಳಿಗೆ 2 ದಿನ ನೀರು ಕೊಡುವ ಪರಿಸ್ಥಿತಿ. ಪಾವಗಡ ತಾಲೂಕಿನಲ್ಲಿ ಬರದ ತೀವ್ರತೆ ಹೆಚ್ಚು.
– ತುರ್ತು 505 ಕೊಳವೆಬಾವಿ ಕೊರೆಸಲಾಗಿದ್ದು, 192 ಕೊಳವೆ ಬಾವಿಗಳು ವಿಫ‌ಲ. 131 ಖಾಸಗಿ ಬೋರ್‌ ವೆಲ್‌ಗ‌ಳಿಂದ ನೀರು ಪಡೆಯಲಾಗುತ್ತಿದೆ.
– ಪಾಲಿಕೆ ವ್ಯಾಪ್ತಿಯಲ್ಲಿ 35 ವಾರ್ಡ್‌ಗಳಲ್ಲಿ 5 ದಿನಕ್ಕೊಮ್ಮೆ ನೀರು ಸರಬರಾಜು. ಸಿರಾ, ತಿಪಟೂರು, ನಗರಸಭೆ, ಚಿಕ್ಕನಾಯಕನಹಳ್ಳಿ, ಕುಣಿಗಲ್‌, ಪಾವಗಡ, ಮಧುಗಿರಿ, ಪುರಸಭೆ ವ್ಯಾಪ್ತಿಯಲ್ಲಿ ವಾರಕ್ಕೆ ಒಮ್ಮೆ ನೀರು, ಕೊರಟಗೆರೆ, ತುರುವೇಕೆರೆ, ಗುಬ್ಬಿ, ಹುಳಿಯಾರ್‌ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ವಾರಕ್ಕೆ ಒಮ್ಮೆ ನೀರು ಬಿಡುಗಡೆ.
– ಜಿಲ್ಲೆಗೆ ಬರ ನಿರ್ವಹಣೆಗೆ 45 ಕೋಟಿ ರೂ.ಬಿಡುಗಡೆ.

ಉತ್ತರ ಕನ್ನಡ
ಗುಳೆ ಹೋಗುವಂತಹ ಸ್ಥಿತಿ ಇಲ್ಲ
– ಜಿಲ್ಲೆಯಲ್ಲಿ ಬರ ಘೋಷಿತ ತಾಲೂಕುಗಳಿದ್ದರೂ, ಜನ ಗುಳೆ ಹೋಗುವ
ಪರಿಸ್ಥಿತಿ ಇಲ್ಲ. ಬೆಳೆ ಹಾನಿಯೇ ಮುಖ್ಯ. ಜಾನುವಾರುಗಳಿಗೆ ಮೇವಿನ
ಕೊರತೆ ಇಲ್ಲ.
– ಅಂಕೋಲಾ ತಾಲೂಕಿನ 43 ಗ್ರಾಮಗಳಿಗೆ ಪ್ರತಿದಿನ 32 ಟ್ಯಾಂಕರ್‌ ಮೂಲಕ ನೀರು ಪೂರೈಕೆ.
– 30ಕ್ಕೂ ಹೆಚ್ಚು ಅಕ್ರಮ ಪಂಪ್‌ಸೆಟ್‌ಗಳ ಸಂಪರ್ಕ ಕಡಿತ.
– ಪ್ರತಿ ತಾಲೂಕಿಗೆ 25 ರಿಂದ 30 ಲಕ್ಷ ರೂ.ಬಿಡುಗಡೆ.

ಮಂಡ್ಯ
ಸಕ್ಕರೆ ನಾಡಲ್ಲೂ ಬರ
– ನಾಗಮಂಗಲ ತಾಲೂಕಿನಲ್ಲಿ ನೀರಿಗೆ ಎಲ್ಲಿಲ್ಲದ ಹಾಹಾಕಾರ ತಾಲೂಕಿನ
62, ಕೆ.ಆರ್‌.ಪೇಟೆ, ಮದ್ದೂರು ಹಾಗೂ ಪಾಂಡವಪುರ ತಾಲೂಕಿನ
ತಲಾ ಒಂದೊಂದು ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ, 23 ಗ್ರಾಮಗಳಿಗೆ
ಖಾಸಗಿ ಬೋರ್‌ವೆಲ್‌ಗ‌ಳ ಮೂಲಕ ನೀರು ಸರಬರಾಜು.
– ಕುಡಿಯುವ ನೀರಿಗಾಗಿ 9.75 ಕೋಟಿ ರೂ.ಬಿಡುಗಡೆ.
– 32 ವಾರಗಳಿಗೆ ಸಾಲುವಷ್ಟು ಮೇವು ಸಂಗ್ರಹವಿದೆ.
– ಹಲವು ಗ್ರಾಮಗಳ ಜನರು ಮೈಲಿಗಟ್ಟಲೆ ದೂರದಿಂದ ನೀರನ್ನು ಹೊತ್ತು
ತರುವಂತಹ ಪರಿಸ್ಥಿತಿ.
– ಶುದ್ಧ ಕುಡಿಯುವ ನೀರಿನ ಘಟಕಗಳು ಬಹುತೇಕ ಬಂದ.

ಕಲಬುರಗಿ
ಕೃಷ್ಣೆಗಿರುವ ಕಾಳಜಿ ಭೀಮೆಗಿಲ್ಲ
– ಜಿಲ್ಲೆಯ ಜಲಾಶಯಗಳಲ್ಲಿ ನೀರು ಡೆಡ್‌ಸ್ಟೋರೇಜ್‌ಗೆ ನಿಂತಿದ್ದು,
ಜೀವನಾಡಿ ಭೀಮಾ ಸಂಪೂರ್ಣ ಬತ್ತಿದೆ.
– ಜಿಲ್ಲೆಯಲ್ಲಿನ ಶೇ.60ರಷ್ಟು ಬಾವಿ, ಬೋರವೆಲ್‌ಗ‌ಳು ಸಂಪೂರ್ಣ
ಬತ್ತಿವೆ.
– 14 ಕಡೆ ಮೇವು ಬ್ಯಾಂಕ್‌ ಆರಂಭ. ಗೋಶಾಲೆ ತೆರೆದಿಲ್ಲ.
– 64 ಜಲಮೂಲಗಳನ್ನು ಬಾಡಿಗೆಗೆ ಪಡೆಯಲಾಗಿದೆ. 133
ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು.

ದಾವಣಗೆರೆ
ಮೇವಿಗಿಲ್ಲ ಬರ
– ಎಲ್ಲಾ ಆರು ತಾಲೂಕುಗಳು ಬರಪೀಡಿತ.
– ಜಿಲ್ಲೆಯಲ್ಲಿ ಮೇವಿಗಿಲ್ಲ ಬರ. 27 ವಾರಕ್ಕಾಗುವಷ್ಟು ಮೇವು ಲಭ್ಯ.
– ಜಿಲ್ಲೆಯ 21 ಹೋಬಳಿಯಲ್ಲಿ 24 ಗೋಶಾಲೆ ಆರಂಭಕ್ಕೆ ಪ್ರಸ್ತಾವನೆ.
– ಜಿಲ್ಲೆಯಲ್ಲಿ ಒಟ್ಟು 4,04,933 ಜಾನುವಾರುಗಳಿದ್ದು, 3,84,998 ಮೆಟ್ರಿಕ್‌ ಟನ್‌ ಮೇವು ಲಭ್ಯ.

ಯಾದಗಿರಿ
ಜಾನುವಾರುಗಳಿಗೆ ತಪ್ಪದ ಪರದಾಟ
– ತೀವ್ರ ಬರ, ಜಾನುವಾರುಗಳಿಗೆ ತಿನ್ನಲು ಮೇವಿಲ್ಲ. 7 ಮೇವು ಬ್ಯಾಂಕ್‌ ಸ್ಥಾಪನೆ. 2 ರೂ.ಗೆ ಕೆ.ಜಿ.ಯಂತೆ ಮೇವು ವಿತರಣೆ. 168 ಮೆಟ್ರಿಕ್‌ ಟನ್‌ ಮೇವು ಸಂಗ್ರಹವಿದ್ದು, 6 ಮೆಟ್ರಿಕ್‌ ಟನ್‌ ಮೇವು ವಿತರಣೆಯಾಗಿದೆ.
ಜಾನುವಾರುಗಳಿಗೆ ಲಸಿಕೆ ಹಾಕಲಾಗಿದ್ದು, ರೋಗದ ಭೀತಿಯಿಲ್ಲ.

ವಿಜಯಪುರ
ಉದ್ಯೋಗ ನಾಸ್ತಿ; ಗುಳೆಯೇ ಆಸ್ತಿ
– ಉದ್ಯೋಗ ಇಲ್ಲದೇ ಲಕ್ಷಾಂತರ ಜನರ ಗುಳೆ.
-ಶ್ರೀಮಂತರ ಹಿಟಾಚಿ, ಜೆಸಿಬಿ ಕಂತು ತುಂಬಲು ನರೇಗಾ ಹಣ ಬಳಕೆ
– 213 ಗ್ರಾಪಂಗಳಲ್ಲೂ ನರೇಗಾ ಯೋಜನೆ ಅನುಷ್ಠಾನ, ಏಪ್ರಿಲ್‌ ಅಂತ್ಯಕ್ಕೆ 6.5 ಲಕ್ಷ ಮಾನವ ದಿನ ಸೃಷ್ಟಿ.

ಶಿವಮೊಗ್ಗ
ಮಲೆನಾಡಲ್ಲೂ ಬರ
– 29ಕ್ಕೂ ಹೆಚ್ಚು ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ.
-ಮಳೆ ಕೊರತೆ, ಬತ್ತಿದ ಕೆರೆ ಕಟ್ಟೆ. ಜಿಲ್ಲೆಯ 29 ಗ್ರಾಮಗಳಲ್ಲಿ ನೀರಿನ ಸಮಸ್ಯೆ, ಟ್ಯಾಂಕರ್‌ ಮೂಲಕ ನೀರು ಪೂರೈಕೆ. ಸೊರಬ ತಾಲೂಕಿನಲ್ಲಿ ಶೇ.70ರಷ್ಟು ಕೆರೆಗಳು ಈಗಾಗಲೇ ಬತ್ತಿವೆ.
– ಮೇವಿಗೆ ಕೊರತೆ ಇಲ್ಲ, 23 ವಾರಗಳಿಗೆ ಸಾಕಾಗುವಷ್ಟು 5,72,400
ಮೆಟ್ರಿಕ್‌ ಟನ್‌ ಮೇವಿದೆ. ಗೋಶಾಲೆಗೆ ಬೇಡಿಕೆ ಬಂದಿಲ್ಲ.
– ನರೇಗಾದಡಿ 28 ಲಕ್ಷ ಮಾನವ ದಿನಗಳ ಸೃಷ್ಟಿ.

ಬೀದರ
ಪಶು ವಿವಿಗೂ ತಟ್ಟಿದ ನೀರಿನ ಬರ
– ಪಶು ವಿವಿಗೂ ನೀರಿನ ¬ಬರ ತಟ್ಟಿದ್ದು, ಸ್ನಾನ, ಶೌಚಕ್ಕೆ ವಿದ್ಯಾರ್ಥಿಗಳು,
ಸಿಬ್ಬಂದಿಗಳು ಪರದಾಡುವಂತಾಗಿದೆ. ಟ್ಯಾಂಕರ್‌ ಮೂಲಕ ನೀರು
ಪೂರೈಸಲಾಗುತ್ತಿದೆ.
– ಜಿಲ್ಲೆಯಲ್ಲಿ ಸುಮಾರು 3.64 ಲಕ್ಷ ಜಾನುವಾರುಗಳಿವೆ. 5 ತಾಲೂಕಿನ 10 ಕಡೆಗಳಲ್ಲಿ ಮೇವು ಕೇಂದ್ರ ಸ್ಥಾಪನೆ. ಮೇವು ಕೇಂದ್ರಗಳಲ್ಲಿ ಎರಡು ರೂ.ಗೆ ಕೆಜಿ ಮೇವು ನೀಡಲಾಗುತ್ತಿದೆ. ಔರಾದ, ಚಿಟಗುಪ್ಪ, ಬೀದರ ತಾಲೂಕಿನಲ್ಲಿ ಮೇವು ಸಮಸ್ಯೆ ಹೆಚ್ಚು.

ಕೊಪ್ಪಳ
ಶೆಡ್‌ನೊಳಗೆ ದನಗಳ ಚಡಪಡಿಕೆ
– ಕಳೆದ 18 ವರ್ಷದಲ್ಲಿ ಬರೊಬ್ಬರಿ 12 ವರ್ಷ ಜಿಲ್ಲೆಯಲ್ಲಿ ಬರ. ಜಿಲ್ಲೆಯ ಏಳು ತಾಲೂಕುಗಳು ಬರಪೀಡಿತ. ನೆಲ ಕಚ್ಚಿದ ಬೆಳೆ, ದುಡಿಮೆ ಅರಸಿ ಗುಳೆ ಹೋಗುತ್ತಿರುವ ಜನತೆ.
– 5 ವಿಧಾನಸಭಾಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಗೋಶಾಲೆ ಆರಂಭ. 4 ಹೋಬಳಿಯಲ್ಲಿ ಮೇವು ಬ್ಯಾಂಕ್‌ ಸ್ಥಾಪನೆ. 2.5 ಲಕ್ಷ ಜಾನುವಾರುಗಳಿವೆ.
– ಜಿಲ್ಲೆಯಲ್ಲಿ 42 ಡಿಗ್ರಿ ಸೆಲ್ಸಿಯಸ್‌ ಬಿಸಿಲಿನ ಪ್ರಖರತೆ ದಾಖಲು. ಬಿಸಿಲಿಗೆ ಶೆಡ್‌ನಲ್ಲಿ ದನಗಳು ಚಡಪಡಿಸುತ್ತಿದ್ದು, ರೋಗಪೀಡಿತವಾಗುತ್ತಿವೆ. ರಾಸುಗಳ ಚಿಕಿತ್ಸೆಗೆ ಪಶು ವೈದ್ಯರ ಕೊರತೆಯಿದೆ.

ಹಾವೇರಿ
ಬರಗಾಲವಿಲ್ಲಿ ನಿರಂತರ
-ಕಳೆದ ನಾಲ್ಕು ವರ್ಷಗಳಿಂದ ನಿರಂತರ ಬರಗಾಲ, 205 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ. ಟ್ಯಾಂಕರ್‌ ಮೂಲಕ ನೀರು ಪೂರೈಕೆ. 57 ಗ್ರಾಮಗಳಲ್ಲಿ 116 ಖಾಸಗಿ ಕೊಳವೆಬಾವಿಗಳನ್ನು ಒಪ್ಪಂದದ ಆಧಾರದ ಮೇಲೆ ಪಡೆಯಲಾಗಿದ್ದು, ಮಾಸಿಕ 10ಸಾವಿರ ರೂ.ಗಳವರೆಗೆ ಬಾಡಿಗೆ.
– ಬೇಸಿಗೆ ಆರಂಭದಿಂದ ಅ ಧಿಕಾರಿಗಳು ಕೊಳವೆಬಾವಿ ಕೊರೆಸಲು ಆರಂಭಿಸಿದ್ದು, ಕೊಳವೆಬಾವಿಯಲ್ಲೂ ನೀರು ಸಿಗದ ಸ್ಥಿತಿ ನಿರ್ಮಾಣ.
– 732 ಶುದ್ಧ ನೀರಿನ ಘಟಕಗಳಿದ್ದು, ಬಹುತೇಕ ಬಂದ್‌ ಆಗುವ ಸ್ಥಿತಿ
ಎದುರಿಸುತ್ತಿವೆ.
– 180 ಲಕ್ಷ ರೂ.ಅನುದಾನ ಬಿಡುಗಡೆ, 54 ಕಾಮಗಾರಿಗಳಿಗೆ ಟೆಂಡರ್‌.

ಚಿತ್ರದುರ್ಗ
ಹಿಂದುಳಿದ ಜಿಲ್ಲೆಗೆ ಮತ್ತೆ ಬರ ಸಿಡಿಲು
– ಜಿಲ್ಲೆಯ ಆರು ತಾಲೂಕುಗಳೂ ಬರಪೀಡಿತ. ಕುಡಿಯುವ ನೀರಿಗೆ ತತ್ವಾರ, ತುತ್ತಿನ ಚೀಲ ತುಂಬಿಸಿಕೊಳ್ಳಲು ಜನರ ಗುಳೆ. ಜಿಲ್ಲೆಯ 145 ಹಳ್ಳಿಗಳಲ್ಲಿ ಟ್ಯಾಂಕರ್‌ ನೀರು ಪೂರೈಕೆ.
– ಮೇವಿಲ್ಲದೆ ಸೊರಗಿರುವ ಜಾನುವಾರುಗಳಿಗೆ ರೋಗ ರುಜಿನಗಳು ಆವರಿಸಿವೆ.
– ಆರು ಗೋಶಾಲೆ-ಎಂಟು ಮೇವು ಬ್ಯಾಂಕ್‌ ಆರಂಭ. ಗೋಶಾಲೆಗಳಲ್ಲಿ
155.79 ಮೆಟ್ರಿಕ್‌ ಟನ್‌ ಮೇವು ಲಭ್ಯ.
– ಸಂಚಾರಿ ವಾಹನಗಳ ಮೂಲಕ ರೈತರ ಮನೆಬಾಗಿಲಿಗೆ ಕೆಜಿಗೆ 2 ರೂ.ನಂತೆ ಮೇವು ಪೂರೈಕೆ.
– ಗುಳೆ ತಪ್ಪಿಸಲು ನರೇಗಾ ಅಡಿ ಒಂದು ಸಾವಿರ ಕೆರೆಗಳ ಪುನಶ್ಚೇತನ ಕಾರ್ಯ ಆರಂಭ.
– ಕುಡಿಯುವ ನೀರಿಗಾಗಿ 317.79 ಲಕ್ಷ ರೂ., ಮೇವಿಗಾಗಿ 94.67 ಲಕ್ಷ ರೂ., ಪ್ರಕೃತಿ ವಿಕೋಪಕ್ಕಾಗಿ 106 ಲಕ್ಷ ರೂ.ಖರ್ಚು.

ಬೆಳಗಾವಿ
ಗಡಿನಾಡು ಜಿಲ್ಲೆಗೂ ಬರದ ಸಂಕಷ್ಟ
– ಎಲ್ಲ 14 ತಾಲೂಕು ಬರಪೀಡಿತ
– ಬರ ಪರಿಹಾರವಿಲ್ಲ, ಟ್ಯಾಂಕರ್‌ ನೀರು ಸಾಲುತ್ತಿಲ್ಲ. ಮೇವಿನ ಅಭಾವ ಇಲ್ಲ.ಗೋಶಾಲೆ ಆರಂಭ ಇಲ್ಲ.
– ಜಿಲ್ಲೆಯಲ್ಲಿ ಒಟ್ಟು 14.22 ಲಕ್ಷ ಜಾನುವಾರುಗಳಿದ್ದು, ಇನ್ನೂ ಏಳು ವಾರಗಳಿಗೆ ಸಾಕಾಗುವಷ್ಟು ಮೇವಿನ ಲಭ್ಯತೆ ಇದೆ.
– ನರೇಗಾದಡಿ 6.5 ಕೋಟಿ ಕಾಮಗಾರಿ. ಏಪ್ರಿಲ್‌, ಮೇ ತಿಂಗಳಲ್ಲಿ 8.96 ಲಕ್ಷ ಮಾನವ ದಿನಗಳ ಸೃಷ್ಟಿ, ಶೇ.70.59 ರಷ್ಟು ಸಾಧನೆ. ಇದಕ್ಕಾಗಿ 19.38 ಕೋಟಿ ರೂ.ವೆಚ್ಚ.

ಗದಗ
ಜಾನುವಾರುಗಳ ಆಹಾರಕ್ಕೆ ತತ್ವಾರ
– 5 ವರ್ಷಗಳಿಂದ ಜಿಲ್ಲೆಯಲ್ಲಿ ಸತತ ಬರ. 2018ರ ಹಿಂಗಾರಿನಲ್ಲಿ ಮಳೆ
ಕೈಕೊಟ್ಟಿದ್ದು, ಶೇ.84.70ರಷ್ಟು ಬೆಳೆ ಹಾನಿಯಾಗಿದೆ.
– ಒಟ್ಟು 5,92,987 ಜಾನುವಾರುಗಳಿವೆ. ಸುಮಾರು 60,542 ಟನ್‌ ಮೇವು ದಾಸ್ತಾನು. 24 ಹಳ್ಳಿಗಳಲ್ಲಿ ಮೇವು ಬ್ಯಾಂಕ್‌ ಸ್ಥಾಪನೆ.
– ಗದಗಿನ ವಾರದ ಸಂತೆಯಲ್ಲಿ ಒಣ ಮೇವು ಟ್ರಾÂಕ್ಟರ್‌ವೊಂದಕ್ಕೆ 4,500 ರಿಂದ 7,000 ರೂ.ಬೆಲೆಗೆ ಮಾರಾಟ.
– ದನ-ಕರುಗಳಿಗಿಲ್ಲ ಬೆಲೆ. 90,000 ರೂ.ನೀಡಿ ಖರೀದಿಸಿದ ಜೋಡಿ
ಎತ್ತುಗಳು 25,000 ರಿಂದ 60,000 ರೂ.ಗೆ ಮಾರಾಟ.
– ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಗೋಶಾಲೆ ಪ್ರಾರಂಭ,
ಗೋಶಾಲೆಗೆ ಬಂದಿರೋದು ಕೇವಲ 41 ಜಾನುವಾರು.

ಚಿಕ್ಕಬಳ್ಳಾಪುರ
ಈ ವರ್ಷದ ಬರ ತೀವ್ರ
– ಕಳೆದ ಹತ್ತು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬರದ ಛಾಯೆ ತೀವ್ರ.
– ಜಿಲ್ಲೆಯ 297 ಗ್ರಾಮ ಗಳಲ್ಲಿ ನೀರಿಗಾಗಿ ಹಾಹಾಕಾರ. 120 ಗ್ರಾಮಗಳಿಗೆ ನಿತ್ಯ 287 ಟ್ಯಾಂಕರ್‌, 177 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಕೆ.
– 136 ಕೊಳವೆ ಬಾವಿ ಕೊರೆಸಿದ್ದು, ಆ ಪೈಕಿ 96 ಕೊಳವೆ ಬಾವಿಗಳು ವಿಫ‌ಲ.
– ಪ್ರತಿ ತಾಲೂಕಿಗೆ ತಲಾ 50 ಲಕ್ಷ ರೂ.ಬಿಡುಗಡೆ. ಕುಡಿಯುವ ನೀರಿಗಾಗಿ 38 ಕೋಟಿಗೆ ಕ್ರಿಯಾಯೋಜನೆ ಸಿದಟಛಿ. ಈವರೆಗೆ ಜಿಲ್ಲೆಗೆ 3 ಕೋಟಿ ರೂ.ಅನುದಾನ ಬಿಡುಗಡೆ.

ಬಾಗಲಕೋಟೆ
ಮೇವು-ನೀರಿನ ಸಮಸ್ಯೆ ಇಲ್ಲ
– ಬಾಗಲಕೋಟೆ, ಜಮಖಂಡಿ, ಬಾದಾಮಿ, ಹುನಗುಂದ, ಜಮಖಂಡಿ,
ಮುಧೋಳ ಸೇರಿದಂತೆ ಆರು ತಾಲೂಕುಗಳು ಬರಪೀಡಿತ.
– 4,65,563 ಜಾನುವಾರುಗಳಿದ್ದು, ಮೇವಿನ ಸಮಸ್ಯೆ ಇಲ್ಲ. ಸದ್ಯ 1.69 ಲಕ್ಷ ಮೆಟ್ರಿಕ್‌ ಮೇವಿದ್ದು, 10 ವಾರಕ್ಕಾಗುವಷ್ಟಿದೆ. ಗೋಶಾಲೆಗಾಗಿ ಈವರೆಗೆ ಬೇಡಿಕೆ ಬಂದಿಲ್ಲ. 8.05 ಮೆಟ್ರಿಕ್‌ ಟನ್‌ ಒಣ ಮೇವು ಸಂಗ್ರಹಣೆ.

ಚಾಮರಾಜನಗರ
ಮಾದಪ್ಪನ ನಾಡಲ್ಲೂ ನೀರಿಗೆ ತತ್ತರ
– ಯಳಂದೂರು, ಕೊಳ್ಳೇಗಾಲ, ಹನೂರು ತಾಲೂಕಿನ 91 ಗ್ರಾಮಗಳಲ್ಲಿ
ಅಂತರ್ಜಲ ಕುಸಿತ, ಕುಡಿಯುವ ನೀರಿಗೆ ಸಮಸ್ಯೆ.
– ಹನೂರು, ಕೊಳ್ಳೇಗಾಲ, ಯಳಂದೂರು ತಾಲೂಕುಗಳಿಗೆ ತಲಾ 50 ಲಕ್ಷ ರೂ.ಚಾ.ನಗರ, ಗುಂಡ್ಲುಪೇಟೆ ತಾಲೂಕಿಗೆ ತಲಾ 25 ಲಕ್ಷ ರೂ.ಅನುದಾನ
ಬಿಡುಗಡೆ.
– ಜಿಲ್ಲೆಯಲ್ಲಿ 2,646 ಕೊಳವೆ ಬಾವಿ ಸ್ಥಗಿತ. 130 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ 902 ಗ್ರಾಮಗಳಿಗೆ ನದಿ, ಕೊಳವೆಬಾವಿ, ಓವರ್‌ ಹೆಡ್‌ ಟ್ಯಾಂಕ್‌ ಹಾಗೂ ಮಿನಿ ಟ್ಯಾಂಕ್‌ ಮೂಲಕ ನೀರು ಸರಬರಾಜು.
– ಜಿಲ್ಲೆಯ 10 ಕಡೆ ಮೇವು ನಿಧಿ ಕೇಂದ್ರ ತೆರೆಯಲು ಸಿದಟಛಿತೆ.
– ಒಟ್ಟು 1,32,589 ಮೆಟ್ರಿಕ್‌ ಟನ್‌ ಮೇವು ಲಭ್ಯ. ಒಟ್ಟು 2,84,495
ಜಾನುವಾರುಗಳಿವೆ.

ಮೈಸೂರು
ಮುಂಗಾರು ಪೂರ್ವ ಮಳೆ ಭರವಸೆ
– ಪಿರಿಯಾಪಟ್ಟಣ ಮತ್ತು ಕೆ.ಆರ್‌.ನಗರ ತಾಲೂಕುಗಳು ಬರಪೀಡಿತವಾಗಿದ್ದರೂ ಮುಂಗಾರು ಪೂರ್ವ ಮಳೆ ಬರದ ತೀವ್ರತೆಯನ್ನು
ಇಲ್ಲವಾಗಿಸಿದೆ. ಮೇವಿನ ತೊಂದರೆ ಇಲ್ಲ. ಗೋಶಾಲೆ ತೆರೆಯುವ ಪರಿಸ್ಥಿತಿ
ನಿರ್ಮಾಣವಾಗಿಲ್ಲ.
– ಜಿಲ್ಲೆಯ 1,54,00 ರೈತರಿಗೆ ಮೇವಿನ ಬೆಳೆ ಬೆಳೆಯಲು ಹಸಿರು ಮೇವಿನ ಆಫ್ರಿಕಲ್‌ ಟಾಲ್‌ ಮೇಜ್‌ (ಎಟಿಎಂ)ನ 6 ಕೆಜಿಯ ಪ್ಯಾಕೆಟ್‌ಗಳ ವಿತರಣೆ. 90 ದಿನಗಳಲ್ಲಿ ಹಸಿರು ಮೇವು ದೊರೆಯುವ ಭರವಸೆ.

ಬೆಂ.ಗ್ರಾಮಾಂತರ
500 ರೂ.ಕೊಟ್ಟರೂ ನೀರಿಲ್ಲ
– ದಿನೇ ದಿನೇ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, 1200ರಿಂದ 1500ವರೆಗೆ ಬೋರ್‌ವೆಲ್‌ ಕೊರೆಸಿದರೂ ನೀರು ಸಿಗುತ್ತಿಲ್ಲ. ಕೆರೆಕುಂಟೆಗಳು ಬತ್ತಿವೆ.
-ಜಿಲ್ಲೆಯ 109 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, ಟ್ಯಾಂಕರ್‌, ಖಾಸಗಿ
ಬೋರ್‌ವೆಲ್‌ಗ‌ಳಿಂದ ನೀರು ಒದಗಿಸಲಾಗುತ್ತಿದೆ.
– ಮೇವಿಗೆ ಬಳಸುವ ಒಣ ರಾಗಿ ಹುಲ್ಲಿನ ಕಟ್ಟಿಗೆ ಸರಾಸರಿ 110 ರಿಂದ 150 ರೂ.ತೆರಬೇಕು.
– ಕನಿಷ್ಠ 500 ರೂ.ಕೊಟ್ಟರೂ ಟ್ಯಾಂಕರ್‌ ನೀರು ಸಿಗುತ್ತಿಲ್ಲ.
– ಜಿಲ್ಲೆಯಲ್ಲಿ 1 ಲಕ್ಷ 283 ಜಾನುವಾರುಗಳಿದ್ದು, 55 ಸಾವಿರದ 868 ಮಿನಿ
ಮೇವಿನ ಬೀಜಗಳ ಕಿಟ್‌ ವುತರಣೆ.
– 1 ಲಕ್ಷದ 11 ಸಾವಿರದ 300 ಮೆಟ್ರಿಕ್‌ ಟನ್‌ ಮೇವು ಲಭ್ಯವಿದ್ದು, ಇನ್ನೂ
18 ವಾರಗಳಿಗೆ ಮೇವಿನ ಕೊರತೆ ಇಲ್ಲ.
ಕೃಪೆ:ಉದಯವಾಣಿ

156 ತಾಲೂಕಲ್ಲಿ ಬರ ನೀರಿಗಾಗಿ ಹಾಹಾಕಾರ
drought-in-156-taluks-is-dirty-for-water