ಮೈಸೂರು, ಏ.04: ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ವ್ಯಾಪ್ತಿಯಲ್ಲಿ ದೊಡ್ಡಮಾರಗೌಡನಹಳ್ಳಿ, ಕಮರವಳ್ಳಿ, ಬೊಮ್ಮೇನಹಳ್ಳಿ ಹಾಗೂ ನಾಗವಾಲ ಗ್ರಾಮಗಳಲ್ಲಿ ಅಂದಾಜು 2113 ಎಕರೆ ಪ್ರದೇಶದಲ್ಲಿ 50:50 ಅನುಪಾತದಲ್ಲಿ ಹೊಸ ಬಡಾವಣೆ ನಿರ್ಮಾಣ ಯೋಜನೆಗೆ ಇಂದು ಡ್ರೋನ್ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಜಿಲ್ಲಾಧಿಕಾರಿಗಳು ಹಾಗೂ MDA ಅಧ್ಯಕ್ಷರಾದ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಮತ್ತು ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್ ಸಂಯುಕ್ತವಾಗಿ ಸರ್ವೆಗೆ ಹಸಿರು ನಿಶಾನೆ ತೋರಿಸಿದರು. ಭೂಮಿಯ ಅಳತೆ, ಗಡಿ ಗುರುತು ಹಾಗೂ ಯೋಜನಾ ರೂಪರೇಷೆಗಳನ್ನು ತ್ವರಿತವಾಗಿ ಸಿದ್ಧಗೊಳಿಸುವ ಉದ್ದೇಶದಿಂದ ಡ್ರೋನ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.

ಈ ವೇಳೆ ಡ್ರೋನ್ ಸರ್ವೆ ಕಾರ್ಯದ ಉಸ್ತುವಾರಿ ವಹಿಸಿರುವ ARV Environment Conservation Care Ltd., ಬೆಂಗಳೂರು ಸಂಸ್ಥೆಯ ಉಪಾಧ್ಯಕ್ಷ ರಾಜಗುರು, ಸೂಪರಿಂಟೆಂಡೆಂಟ್ ಇಂಜಿನಿಯರ್, ಕಾರ್ಯದರ್ಶಿಗಳು, ನಗರ ಯೋಜನಾ ಸದಸ್ಯರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ವ್ಯವಸ್ಥಾಪಕರು, ವಿಶೇಷ ರಾಜಸ್ವ ನಿರೀಕ್ಷಕರು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ಥಳೀಯ ಮುಖಂಡರು ಮತ್ತು ಭೂಮಿಯ ಮಾಲೀಕರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಯೋಜನೆ ಕುರಿತ ನಿರೀಕ್ಷೆಗಳು ಹೆಚ್ಚಿರುವುದಾಗಿ ತಿಳಿದುಬಂದಿದೆ.
Key words: Mysuru, Drone Survey, Begins for 2,113-Acre New Layout, MDA, Mysore.

SUMMARY:
Mysuru: Drone Survey Begins for 2,113-Acre New Layout
Mysuru, Apr 4: The Mysuru Development Authority (MDA) has launched a drone-based survey for developing a new layout across 2,113 acres in Doddamaragowdanahalli, Kamaravalli, Bommenahalli, and Nagawala villages under a 50:50 scheme.
The survey was inaugurated by the Deputy Commissioner, who also serves as MDA Chairman, along with the Commissioner. The initiative aims to speed up land measurement, boundary identification, and planning using drone technology.

Officials from ARV Environment Conservation Care Ltd., Bengaluru, including Vice President Rajaguru, along with engineers, planning members, revenue officials, local leaders, and landowners, were present.







