ಮೋದಿ ಹಿಂದೂ ರಾಷ್ಟ್ರ ಮಾಡ್ತೀವಿ ಅಂತಾರೆ ಅದು ಕನಸಿನ ಮಾತು- ಡಿಸಿಎಂ ಡಿ.ಕೆ ಶಿವಕುಮಾರ್.

ಬೆಂಗಳೂರು,ಮೇ,27,2024 (www.justkannada.in):  ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂ ರಾಷ್ಟ್ರ ಮಾಡ್ತೀವಿ ಅಂತಾರೆ. ಆದರೆ ಅದು ಕನಸಿನ ಮಾತು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.

ಇಂದು ಮಾತನಾಡಿ ಡಿಸಿಎಂ ಡಿ.ಕೆ ಶಿವಕುಮಾರ್,  ಮೋದಿ ಅವರಿಗೆ ಸೋಲುತ್ತೇವೆ ಅಂತಾ ಗೊತ್ತಾಗಿದೆ ವೋಟ್ ಗಾಗಿ ಹಿಂದೂ ಮುಸ್ಲೀಂರನ್ನ ಡಿವೈಡ್ ಮಾಡ್ತಾರೆ. ಭಾಷಣದಲ್ಲಿ ಮುಸ್ಲಿಮರ ವಿರುದ್ದವಾಗಿ ಮಾತನಾಡುತ್ತಾರೆ ಮಾಧ್ಯಮಗಳ ಜೊತೆ ಮುಸ್ಲಿಮರ ಪರ ಮಾತನಾಡುತ್ತಾರೆ. ಹತಾಎಯಿಂದ ಮೋದಿ ಮಾತನಾಡುತ್ತಿದ್ದಾರೆ.  ಮೋದಿ ಏನು ದೇವರ ಅವತಾರನಾ..?   ಬಹುತ್ವದ ಬಗ್ಗೆ ಮೋದಿಗೆ ನಂಬಿಕೆಯೇ ಇಲ್ಲ.  ಮೋದಿ ಹಿಂದೂ ರಾಷ್ಟ್ರ ಮಾಡುತ್ತೀವಿ ಅಂತಾರೆ ಇದು ಕನಸಿನ ಮಾತು ಎಂದು ಟಾಂಗ್ ಕೊಟ್ಟರು.

ರಾಜ್ಯದಲ್ಲಿ ಭದ್ರಬುನಾದಿ ಸರ್ಕಾರ ಬಂದಿದೆ. ಇದು 4 ವರ್ಷದ ಸರ್ಕಾರ ಅಲ್ಲ 10 ವರ್ಷದ ಸರ್ಕಾರ. ಕರ್ನಾಟಕದಿಂದ  ಇಂಡಿಯಾ ಮೈತ್ರಿ ಕೂಟ ರಚನೆಯಾಗಿದೆ. ಒಳ್ಳೆಯ ಶುಭ ಸೂಚನೆ ಬರುತ್ತಿದೆ. ಇವಿಎಂ ಮಿಷನ್ ಗಳು ಏನು ಆಗದೇ ಹೋದರೇ ಜನ ನಮ್ಮ ಪರವಾಗಿದ್ದಾರೆ. ನಮ್ಮ ಪರ ತೀರ್ಪು ನೀಡುವ ಭರವಸೆ ಇದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

Key words: dream, Modi, Hindu country, DCM, DK Shivakumar