ಐಪಿಎಲ್ ಟೈಟಲ್ ಪ್ರಾಯೋಜಕತ್ವ ಪಡೆದ ಡ್ರೀಮ್ 11…..

ಮುಂಬೈ, ಆಗಸ್ಟ್, 17, 2020(www.justkannada.in): ಐಪಿಎಲ್ ಶೀರ್ಷಿಕೆಯ ಪ್ರಾಯೋಜಕತ್ವವನ್ನ  ಫ್ಯಾಂಟಸಿ ಸ್ಪೋರ್ಟ್ಸ್ ಕಂಪನಿ ಡ್ರೀಮ್ 11 ಪಡೆದುಕೊಂಡಿದೆ.jk-logo-justkannada-logo

ಎಲ್ಲಾ ಪ್ರತಿಸ್ಪರ್ಧಿಗಳನ್ನ ಹಿಂದಿಕ್ಕಿ ಡ್ರೀಮ್ 11 ಈ ಬಾರಿಯ ಐಪಿಎಲ್ ಟೈಟಲ್ ಪ್ರಾಯೋಜಕತ್ವ ಪಡೆದುಕೊಂಡಿದೆ. ಚೀನಾ ಮೂಲದ ಸಂಸ್ಥೆ ವಿವೊ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಪಂದ್ಯಾವಳಿ ಆರಂಭಕ್ಕೂ ಮುನ್ನ ಟೈಟಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು. ಈ ಸಂದರ್ಭ ಮುಖ್ಯ ಪ್ರಾಯೋಜಕರಾಗಲು ಹತ್ತು ಹಲವು ಸಂಸ್ಥೆಗಳು ಬಿಡ್ ಸಲ್ಲಿಸಿದ್ದವು. ಈ ನಡುವೆ ಟಾಟಾ ಸನ್ಸ್ ಸಂಸ್ಥೆ ಈ ರೇಸ್ ನಲ್ಲಿ ಉಳಿದ ಕಂಪನಿಗಳಿಗಿಂತ ಮುಂದಿತ್ತು.dream-11-ipl-title-sponsor

222 ಕೋಟಿ ರೂ. ಮೊತ್ತಕ್ಕೆ ಡ್ರೀಮ್ 11 ಐಪಿಎಲ್ ಟೈಟಲ್ ಪ್ರಾಯೋಜಕತ್ವ ತನ್ನದಾಗಿಸಿಕೊಂಡಿದೆ.  ಐಪಿಎಲ್ ಬ್ರ್ಯಾಂಡ್ ಮೌಲ್ಯ ಎಲ್ಲವನ್ನು ಪರಿಗಣಿಸಿ ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಂತಿಮ ನಿರ್ಧಾರ ಕೈಗೊಳ್ಳುವುದು ಸಾಮಾನ್ಯ.

key words: Dream 11 – IPL- title sponsor.