Saturday, September 19, 2026

BDA Apartments

RCB ದುರ್ಘಟನೆ: “ಇಂಟಲೆಜೆನ್ಸಿ ಫೈಲೂರ್ ” ಒಪ್ಪಿಕೊಂಡ ಡಾ.ಯತೀಂದ್ರ ಸಿದ್ದರಾಮಯ್...
Home Front Page RCB ದುರ್ಘಟನೆ: “ಇಂಟಲೆಜೆನ್ಸಿ ಫೈಲೂರ್ ” ಒಪ್ಪಿಕೊಂಡ ಡಾ.ಯತೀಂದ್ರ ಸಿದ್ದರಾಮಯ್ಯ

RCB ದುರ್ಘಟನೆ: “ಇಂಟಲೆಜೆನ್ಸಿ ಫೈಲೂರ್ ” ಒಪ್ಪಿಕೊಂಡ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಜೂನ್,5,2025 (www.justkannada.in): ಆರ್.ಸಿ.ಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ ಅಭಿಮಾನಿಗಳ ದುರಂತ ಸಾವಿಗೆ ಸಂಬಂಧಿಸಿದಂತೆ “ಇಂಟಲೆಜೆನ್ಸಿ ಫೈಲೂರ್  ಘಟನೆ ಕಾರಣ ಎಂದು  ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಎಂಎಲ್ ಸಿ ಯತೀಂದ್ರ ಸಿದ್ರಾಮಯ್ಯ, ಘಟನೆಗೆ ಇಂಟಲಿಜೆನ್ಸ್ ಫೈಲ್ಯೂರ್ ಅಂತಾ ನಾನು ಒಪ್ಪಿಕೊಳ್ಳುತ್ತೇನೆ. ನಿರೀಕ್ಷೆಗಿಂತ ಹೆಚ್ಚಿನ ಜನ ಬಂದಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಣ  ಮಾಡಲು ಸಾಧ್ಯವಾಗಲಿಲ್ಲ. ಆಗಿರುವ ಪ್ರಮಾದವನ್ನು ನಾವು ಒಪ್ಪಿಕೊಳ್ಳುತ್ತೇವೆ. ಇದಕ್ಕಾಗಿ ಮ್ಯಜಿಸ್ಟ್ಟ್ರೆಟರ್ ತನಿಖೆಗೆ ಆದೇಶ ಮಾಡಿದ್ದೇವೆ. ಇದರಲ್ಲಿ ಸಿಎಂ, ಡಿಸಿಎಂ ಪಾತ್ರವಿಲ್ಲ ಆರ್.ಸಿ.ಬಿ ಮ್ಯಾನೇಜ್ ಮೆಂಟ್ ಸಂಭ್ರಮಾಚರಣೆ ಮಾಡಿ ಅಂತ ಮನವಿ ಮಾಡಿದರು. ಈ ಕಾರಣಕ್ಕಾಗಿ ನಾವು ಒಪ್ಪಿಕೊಂಡಿದ್ದೇವೆ. ಎರಡು ಕಡೆ ಏಕ ಕಾಲಕ್ಕೆ ನಿರೀಕ್ಷೆಗೂ ಮೀರಿ ಜನ ಬಂದರು. ಎಲ್ಲಾ ಜವಾಬ್ದಾರಿಗಳನ್ನು ಪೊಲೀಸರಿಗೆ ಕೊಡಲಾಗಿತ್ತು ಎಂದು ತಿಳಿಸಿದರು.

ಸಾವಿನಲ್ಲಿ ಬಿಜೆಪಿ ರಾಜಕೀಯ

ಸಾವಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ವಿರೋಧ ಪಕ್ಷವಾಗಿ ನಮ್ಮನ್ನು ತಿದ್ದುವ ಕೆಲಸ ಮಾಡಲಿ. ಅದನ್ನು ಬಿಟ್ಟು ಇಂತಹ ಸಮಯದಲ್ಲಿ ರಾಜಕೀಯ ಸರಿಯಿಲ್ಲ. ವಿಧಾನಸೌಧದಲ್ಲಿ  ರಾಜಕಾರಣಿಗಳ ಕುಟುಂಬಕ್ಕಾಗಿ ಕಾರ್ಯಕ್ರಮ ಎಂಬುದು ಸರಿಯಿಲ್ಲ. ಹೆಚ್ಚು ಜನ ಸೇರೋದು ಸ್ಟೇಡಿಯಂ ನಲ್ಲಿ. ಅಲ್ಲಿ ಈ ಘಟನೆ ಆಗಬಾರದಿತ್ತು ಆಗಿದೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.vtu

Key words: RCB, tragedy, Dr. Yathindra Siddaramaiah, intelligence failure