ಡಾ. ವಿಷ್ಣುವರ್ಧನ್ ಮೈಸೂರಿನವರಾದರೂ ವಿಶ್ವದೆಲ್ಲಡೆ ಜನಪ್ರಿಯರಾಗಿದ್ದಾರೆ-  ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್

ಮೈಸೂರು,ಡಿಸೆಂಬರ್,30,2020(www.justkannada.in): ಸಾಹಸಸಿಂಹ ವಿಷ್ಣುವರ್ಧನ್ ರವರು ಮೂಲತಃ ಮೈಸೂರಿನವರಾದರೂ ಕೂಡ ವಿಶ್ವದೆಲ್ಲಡೆ ಜನಪ್ರಿಯರಾಗಿದ್ದಾರೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಎಚ್ ವಿ ರಾಜೀವ್ ಬಣ್ಣಿಸಿದರು.

ಕರುಣಾಮಯಿ ವಿಷ್ಣು ಅಭಿಮಾನಿಗಳ ಬಳಗ ಮತ್ತು ವಿಷ್ಣು ಸೇನಾ ಸಮಿತಿ ಹಾಗೂ  ಮೈಸೂರಿನ ಗಾಂಧಿವೃತ್ತ ಸಂಘ ವತಿಯಿಂದ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ 11 ನೇ ವರ್ಷದ ಪುಣ್ಯಸ್ಮರಣೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಲ್ಲಿರುವ ಡಾ ವಿಷ್ಣುವರ್ಧನ್ ಉದ್ಯಾನವನದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಆ ನಂತರ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಚ್ ವಿ ರಾಜೀವ್, ಸಾಹಸಸಿಂಹ ವಿಷ್ಣುವರ್ಧನ್ ರವರು ಮೂಲತಃ ಮೈಸೂರಿನವರಾದರೂ ಕೂಡ ವಿಶ್ವದೆಲ್ಲಡೆ ಜನಪ್ರಿಯರಾಗಿದ್ದಾರೆ, ಅವರ ಪ್ರತಿಯೊಂದು ಚಿತ್ರಗಳು ಸಹ ಕೌಟುಂಬಿಕ ಪ್ರಧಾನವಾಗಿತ್ತು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಜೊತೆಯಲ್ಲೆ ಚಿತ್ರರಂಗದಲ್ಲಿ ಹೊಸ ಆಯಾಮ ಸೃಷ್ಟಿಸುವಲ್ಲಿ ಕಲಾವಿದರಿಗೆ ಮಾದರಿಯಾಗಿತ್ತು, ಕನ್ನಡ ನೆಲ ಜಲ ಭಾಷೆಯ ವಿಚಾರಕ್ಕೆ ಧಕ್ಕೆ ಬಂದಾಗ ಧ್ವನಿ ಎತ್ತುತ್ತಿದ್ದ ಮಹಾನ್ ವ್ಯಕ್ತಿ ಡಾ. ವಿಷ್ಣುವರ್ಧನ ರವರು, ಚಿತ್ರನಗರಿ ಮೈಸೂರಿನಲ್ಲಿ ಸ್ಥಾಪನೆಯ ಪರಿಕಲ್ಪನೆ ನೀಡಿದ್ದೇ ವಿಷ್ಣುವರ್ಧನ ರವರು ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ  ಸಮಾಜ ಸೇವಕರಾದ ಡಿ ಟಿ ಪ್ರಕಾಶ್, ವಿಷ್ಣು ಸೇನಾ ಸಮಿತಿ ಅಧ್ಯಕ್ಷರಾದ ಎಂ ಡಿ ಪಾರ್ಥಸಾರಥಿ, ಮಾಜಿ ಮಹಾಪೌರರಾದ ಭೈರಪ್ಪ,  ನಗರ ಪಾಲಿಕಾ ಸದಸ್ಯರಾದ ಮಾ ವಿ ರಾಮಪ್ರಸಾದ್ ,ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷರಾದ ಎಸ್ ಎನ್ ರಾಜೇಶ್ ,ಲಲಿತಾದ್ರಿಪುರ ವಿಷ್ಣು ಅಭಿಮಾನಿಗಳ  ಸಂಘದ ಅಧ್ಯಕ್ಷರಾದ ಬಸವಣ್ಣ ,ಉಪಾಧ್ಯಕ್ಷ ಮಂಜು, ಮಹದೇವ್ ,ಮೈಸೂರಿನ  ಗಾಂಧಿ ವೃತ್ತ  ವಿಷ್ಣು ಸಂಘದ ಅಧ್ಯಕ್ಷರಾದ ಮುಬಾರಕ್ ,ಉಪಾಧ್ಯಕ್ಷ ವಾಲೆ ಕುಮಾರ್, ಅಕ್ರಂ ಮತ್ತು ಅಸ್ಗರ್ ,ಬಿ ಸುರೇಶ್ ಬಾಬು ,ಕಡಕೊಳ ಜಗದೀಶ್, ಅಜಯ್ ಶಾಸ್ತ್ರಿ,ಹರೀಶ್ ನಾಯ್ಡು, ನವೀನ್ ಕೆಂಪಿ ,ರಂಗನಾಥ್ ,ಪ್ರಶಾಂತ್ ಭಾರದ್ವಾಜ್ ,ಹಾಗೂ ಇನ್ನಿತರರು ಹಾಜರಿದ್ದರು.Dr. Vishnu Vardhan – popular- all over - world – Mysore- MUDA President- HV Rajeev.

Key words: Dr. Vishnu Vardhan – popular- all over – world – Mysore- MUDA President- HV Rajeev.