Wednesday, August 19, 2026

BDA Apartments

Home Front Page ಜಿಲ್ಲಾವಾರು ವಿಷ್ಣು ಸೇವಕರಿಗೆ ಡಾ. ವಿಷ್ಣುವರ್ಧನ್ ಸೇವಾ ಪ್ರಶಸ್ತಿ ಪ್ರದಾನ.

ಜಿಲ್ಲಾವಾರು ವಿಷ್ಣು ಸೇವಕರಿಗೆ ಡಾ. ವಿಷ್ಣುವರ್ಧನ್ ಸೇವಾ ಪ್ರಶಸ್ತಿ ಪ್ರದಾನ.

ಮೈಸೂರು,ಸೆಪ್ಟಂಬರ್,20,2021(www.justkannada.in): ಸಾಹಸಸಿಂಹ ಡಾ ವಿಷ್ಣುವರ್ಧನ್ ಹುಟ್ಟುಹಬ್ಬದ ಅಂಗವಾಗಿ ಚಾಮುಂಡಿಪುರಂ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಡಾಕ್ಟರ್ ವಿಷ್ಣು ಸೇನಾ ಸಮಿತಿ ಹಾಗೂ ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ವತಿಯಿಂದ ಮೈಸೂರು ಜಿಲ್ಲೆಯ ಸುತ್ತಮುತ್ತಲಿನ ಹಲವಾರು ವರ್ಷಗಳಿಂದ ಸಾಹಸಸಿಂಹ ವಿಷ್ಣುವರ್ಧನ್ ಹೆಸರಿನಲ್ಲಿ ನಿರಂತರ ಸೇವಾ ಕಾರ್ಯ ಮಾಡುತ್ತಿರುವ ಜಿಲ್ಲಾವಾರು ವಿಷ್ಣು ಸೇವಕರಿಗೆ ಡಾ॥ ವಿಷ್ಣುವರ್ಧನ್ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಿ ನರಸೀಪುರ ಶಿವು , ಹೊಸಳ್ಳಿ ಮಂಡ್ಯ ರಾಮಕೃಷ್ಣ , ಬನ್ನೂರಿನ ಮಹೇಂದ್ರಸಿಂಗ್ ಕಾಳಪ್ಪ ,ದೂರದ ಸೋಮಶೇಖರ್ , ಎಚ್ ಡಿ ಕೋಟೆ  ಸಮೀವುಲ್ಲಾ  ಮೈಸೂರು ನಗರದ ಮುಬಾರಕ್ ಹಾಗೂ ಸಿದ್ದಪ್ಪ ಅವರು ಡಾ. ವಿಷ್ಣುವರ್ಧನ್ ಸೇವಾ ಪ್ರಶಸ್ತಿ  ಸ್ವೀಕರಿಸಿದರು.   ಚಿನ್ನ ಬೆಳ್ಳಿ ,ಫಲಕ ನೀಡಿ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇಳೈ ಆಳ್ವಾರ್ ಸ್ವಾಮೀಜಿ ,ಮಾಜಿ ಮೇಯರ್ ಸಂದೇಶ್ ಸ್ವಾಮಿ, ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ ,ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಸಿ ನಾರಾಯಣಗೌಡ ,ಕಾಂಗ್ರೆಸ್ ಯುವ ಮುಖಂಡ ಎನ್ ಎಂ  ನವೀನ್ ಕುಮಾರ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಎಂ ಡಿ ಪಾರ್ಥಸಾರಥಿ, ಅಪೂರ್ವ ಸುರೇಶ್, ಕಡಕೊಳ ಜಗದೀಶ್, ನಾಡಪ್ರಭು ಕೆಂಪೇಗೌಡರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರದ  ಗಂಗಾಧರ್ ಗೌಡ, ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಎಸ್ ಎನ್ ರಾಜೇಶ್ ,ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ ,ವಿನಯ್ ಕಣಗಾಲ್, ಹರೀಶ್ ನಾಯ್ಡು ,ಮಹಾದೇವ್ , ಹಾಗೂ ಇನ್ನಿತರರು ಹಾಜರಿದ್ದರು.

Key words: Dr. Vishnu – serving -district. – Vishnuvardhan Seva Awards-mysore