ದಕ್ಷಿಣ ಕನ್ನಡ,ಸೆಪ್ಟಂಬರ್,26,2025 (www.justkannada.in): ಧರ್ಮಸ್ಥಳದ ವಿರುದ್ದ ಷಡ್ಯಂತ್ರ ಅಪಪ್ರಚಾರ ಆರೋಪ ಸಂಬಂಧ ಎಸ್ ಐಟಿ ರಚನೆ ಮಾಡಿದ ಕಾರಣಕ್ಕೆ ಎಲ್ಲಾ ಸತ್ಯ ಹೊರಗೆ ಬರುತ್ತಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ವೀರೇಂದ್ರ ಹೆಗಡೆ, ಸಿದ್ದಗಂಗಾ ಶ್ರೀಗಳು, ಕೋವಿಡ್ ಸಂಬಂಧ ಪುಸ್ತಕಗಳನ್ನ ಓದುತ್ತಿದ್ದೇನೆ ನಮ್ಮ ಸೇವೆ ಧರ್ಮ ನಮಗೆ ಮುಖ್ಯ ಅಂತಿದೆ. ತ್ರಿವಿಧ ದಾಸೋಹಿ ಶತಾಯಿಷಿ ಸಿದ್ದಗಂಗಾ ಶ್ರೀ ಹೇಳಿದ ಮಾತಿದು. ಶತ್ರುತ್ವ ಯಾಕೆ ಬಂತು ಅಂತ ನಮಗೆ ಗೊತ್ತಿಲ್ಲ. ಇಷ್ಟು ಹಗೆತನ ಅಪವಾದ ಯಾಕೆ ಬಂತು ಅಂತ ನಮಗೆ ಗೊತ್ತಿಲ್ಲ ನಾವು ಸೇವೆ ಮಾಡುತ್ತೇವೆ ಆದರೆ ಸೇವೆ ಪ್ರಚಾರ ನಮಗಲ್ಲ ಇಷ್ಟು ವರ್ಷ ನಾವು ಆರೋಗ್ಯವಾಗಿರಲು ನಿಸ್ವಾರ್ಥ ಸೇವೇಯೇ ಕಾರಣ. ನಮ್ಮ ಎಲ್ಲಾ ಕಾರ್ಯಕ್ರಮಗಳನ್ನ ನೀವೆಲ್ಲರೂ ಗಮನಿಸಿದ್ದೀರಿ ನಾವು ಇಲ್ಲಿ ನಿಮಿತ್ತ ಮಾತ್ರ. ಕೆಲವರು ಪ್ರೀತಿಯಿಂ ದ ಟೀಕೆ ಮಾಡಿದ್ರು ನಿಮಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದರು.
ಧರ್ಮಸ್ಥಳ ಬೇರೆ ಧರ್ಮಸ್ಥಳ ಊರಿನವರು ಬೇರೆ ಅಲ್ಲ. ನಮ್ಮ ಮೇಲೆ ಎಷ್ಟು ನಿಷ್ಠುರವಾಗಿ ದಬ್ಬಾಳಿಕೆ ಆಗಿದೆ ಎಂದು ನೋಡಿದ್ದೀರಿ. ನಮ್ಮ ಮೇಲೆ ಯಾಕೆ ಇಷ್ಟೊಂದು ದ್ವೇಷ ಗೊತ್ತಿಲ್ಲ ಈಗ ಮನಸ್ಸು ಸ್ವಲ್ಪ ಹಗುರವಾಗಿದೆ. ನಮ್ಮ ಮೇಲೆ ದೃಢವಾದ ನಂಬಿಕೆಯಿಟ್ಟ ಎಲ್ಲರಿಗೂ ಅಭಾರಿ ಎಂದು ವಿರೇಂದ್ರ ಹೆಗಡೆ ತಿಳಿಸಿದ್ದಾರೆ.
Key words: Dharmasthala case, Dr. Virendra Heggade, thanks , government