ಎಲ್ಲಾ ಆರೋಪಗಳು ಈಗ ತೊಳೆದು ಹೋದಂತಾಗಿದೆ- ಡಾ.ವೀರೆಂದ್ರ ಹೆಗ್ಗಡೆ

ದಕ್ಷಿಣ ಕನ್ನಡ,ಆಗಸ್ಟ್,23,2025 (www.justkannada.in): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಆರೋಪ ಮಾಡಿದ್ದ ದೂರುದಾರ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸಿದ ಬೆನ್ನಲ್ಲೆ ಮೊದಲ ಬಾರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೆಂದ್ರ ಹೆಗ್ಗಡೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಡಾ.ವೀರೇಂದ್ರ ಹೆಗ್ಗಡೆ, ಒಂದೊಂದೇ ಸತ್ಯ ಸಂಗತಿ ಹೊರ ಬರುತ್ತಿವೆ.  ಇದರ ಬಗ್ಗೆ ನಾನು ಈಗ ಮಾತನಾಡುವುದಿಲ್ಲ.  ಎಲ್ಲಾ ಆರೋಪಗಳು ಈಗ ತೊಳೆದು ಹೋದಂತಾಗಿದೆ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಹೀಗೆ ಇರಲಿ ಎಂದಿದ್ದಾರೆ.

ತನಿಖೆಯಿಂದ ಇನ್ನೂ ಎಲ್ಲಾ ವಿಚಾರಗಳು ಗೊತ್ತಾಗಲಿವೆ. ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು, ಕ್ಷೇತ್ರದ ಮೇಲಿನ ಜನರ ಭಕ್ತರ ಅಭಿಮಾನ ಹೀಗೇ ಇರಲಿ. ಎಸ್‌ಐಟಿ ತನಿಖೆ ಹಂತದಲ್ಲಿರುವುದರಿಂದ ಈ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದು ವೀರೆಂದ್ರ ಹೆಗ್ಗಡೆ ತಿಳಿಸಿದ್ದಾರೆ.

Key words: Dharmasthala,Case,  allegations, SIT,  Dr. Virendra Hegde