ಡಾ.ವಿಜಯಾ ದಬ್ಬೆ ನೆನಪಿನ ಕವನ,ಕಥಾ ಸ್ಪರ್ಧೆ ಫಲಿತಾಂಶ : ಬಾಲಾಜಿ ಮತ್ತು ಪಲ್ಲವಿ ಪ್ರಥಮ

ಮೈಸೂರು,ಮೇ,12,2025 (www.justkannada.in): ಮೈಸೂರಿನ ‘ಸಮತಾ ಅಧ್ಯಯನ ಕೇಂದ್ರ’ವು ಸಂಸ್ಥಾಪಕ ಅಧ್ಯಕ್ಷೆ ಡಾ.ವಿಜಯಾ ದಬ್ಬೆ ಅವರ ನೆನಪಿನಲ್ಲಿ  ವಿದ್ಯಾರ್ಥಿ, ಯುವಜನರಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಕವನ‌ ಸ್ಪರ್ಧೆ ಮತ್ತು ಕಿರಿಯ ಲೇಖಕಿಯರಿಗೆ ಆಯೋಜಿಸಿದ್ದ ಸಣ್ಣಕಥಾ ಸ್ಪರ್ಧೆ-2025 ರ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಕವನ‌ ಸ್ಪರ್ಧೆ ವಿಜೇತರು:

20 ರಿಂದ 35 ವಯೋಮಾನದ ವಿದ್ಯಾರ್ಥಿ, ಯುವಜನರಿಗೆ ಆಯೋಜಿಸಿದ್ದ ಕವನ ಸ್ಪರ್ಧೆಯಲ್ಲಿ  ಕೆಜಿಎಫ್‌ ನ ಆರ್. ಬಾಲಾಜಿ ಅವರ ‘ಎಂಟರ ಮನೆಯೊಳಗೆ ಕುಂಟೆ ಬಿಲ್ಲೆಯ ಆಟ’ (ಪ್ರಥಮ), ಕೇರಳ‌ ಕೇಂದ್ರೀಯ ವಿವಿಯ  ಜೋತಿರ್ಲಕ್ಷ್ಮಿ ಅವರ ‘ಫಿಂಗರ್ ಪ್ರಿಂಟಿನಲ್ಲಿ ಅವಳ ವಿಶ್ವರೂಪ ‘ ಮತ್ತು ಬಂಟ್ವಾಳದ ಜಯಶ್ರೀ ಇಡ್ಕಿದು ಅವರ ‘ಬಾಡಿಗೆ ಕೋಣೆ’ (ಇಬ್ಬರಿಗೂ ದ್ವಿತೀಯ), ಕೊಳ್ಳೇಗಾಲ ಚಿನ್ನಿಪುರದ ರಶ್ಮಿ ಎಸ್.ನಾಯಕ್ ಅವರ ‘ ಹೆಣ್ತನ ಶಾಪವೇ’ (ತೃತೀಯ) ಕವನಗಳು ಮೊದಲ ಮೂರು ಬಹುಮಾನ ಪಡೆದಿವೆ.

ಸೌಮ್ಯಶ್ರೀ ನಿಕ್ಕಮ್ (ದಾವಣಗೆರೆ),ವಿದ್ಯಾ ದೇವಾಡಿಗ (ಬೆಂಗಳೂರು), ಶ್ರೀ ವಿದ್ಯಾ (ಕಲ್ಕುಣಿಕೆ, ಹುಣಸೂರು), ಪಲ್ಲವಿ ಎಡೆಯೂರು ( ಬೆಂಗಳೂರು), ಸಂತೋಷಕುಮಾರ್ ಬಿ.ಪಿ. (ದಾವಣಗೆರೆ), ನಂದಿನಿ ಯು(ಉರಗನಹಳ್ಳಿ, ಸೊರಬ), ಮೇಘಾ ರಾಮದಾಸ್ (ಗುಳಿಗೆಯನಹಳ್ಳಿ, ಶಿರಾ), ಸಂಜನ ಸಿ.ಯಂಭತ್ನಾಳ (ಬೆಳಗಾವಿ), ಜ್ಯೋತಿ ಎಸ್ (ಯಳಂದೂರು), ಸಿದ್ದಾರೂಢ ಸಂ ಗುಗ್ಗರಿ (ಬೆಳಗಾವಿ), ಡಾ.ಭವ್ಯ ಅಶೋಕ್ ಸಂಪಗಾರ(ಬೆಳಗಾವಿ), ಡಾ.ಪರ್ವೀನ್ ಬೇಗಮ್ (ಗಂಗಾವತಿ), ಯಶಸ್ವಿನಿ ಎಂ.ಎನ್.(ಪಡುವಾರ ಹಳ್ಳಿ,ಮೈಸೂರು) ಅವರ ಕವನಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ. ಸ್ಪರ್ಧೆಗೆ 39 ಪ್ರವೇಶಗಳು ಬಂದಿದ್ದವು. ಡಾ. ಆರ್.ಸುನಂದಮ್ಮ, ಡಾ.ಬಿ.ಆರ್. ಗಣೇಶ್ ಮತ್ತು ಡಾ.‌ಸೆಲ್ವಕುಮಾರಿ ತೀರ್ಪುಗಾರರಾಗಿದ್ದರು.

ಕಥಾ‌ ಸ್ಪರ್ಧೆ‌ ವಿಜೇತರು:

20 ರಿಂದ 40 ವಯೋಮಾನದ ಲೇಖಕಿಯರಿಗೆ ಏರ್ಪಡಿಸಿದ್ದ ಸಣ್ಣಕಥಾ ಸ್ಪರ್ಧೆಯಲ್ಲಿ ಬೆಂಗಳೂರಿನ  ಪಲ್ಲವಿ ಎಡೆಯೂರು ಅವರ ‘ಯುರೋಪ್ಲೊಮೆಟ್ರಿ’ (ಪ್ರಥಮ ), ರಾಮನಗರದ ವಿನುತ ಕೆ.ಆರ್. ಅವರ ‘ತಾಯಿ ಅಂದರೆ’ (ದ್ವಿತೀಯ )ಮತ್ತು ಮಾಲೂರಿನ ಡಾ.ಎಸ್. ಶಿಲ್ಪ ಅವರ ‘ಬಾಯಿ ಬಣ್ಣ’ (ತೃತೀಯ) ಮೊದಲ‌ ಮೂರು ಬಹುಮಾನ ಪಡೆದಿವೆ.

ಅಕ್ಷತಾ ರಾಜ್ (ಪೆರ್ಲ, ಕಾಸರಗೋಡು),ಅಚಲ ಬಿ.ಹೆನ್ಲಿ ( ಬೆಂಗಳೂರು), ರಂಜಿತ ವಿ. ಮಹಾಜನ್ (ಬೆಳಗಾವಿ), ತೇಜಶ್ರೀ ಎಂ (ಉಜಿರೆ, ದಕ್ಷಿಣ ಕನ್ನಡ), ಫೌಜ್ಹಿಯಾ ಸಲೀಂ( ಗುರುಪುರ, ಮಂಗಳೂರು), ಡಾ.ಭವ್ಯ ಅಶೋಕ್ ಸಂಪಗಾರ (ಬೆಳಗಾವಿ), ಸಿಂಧು ಎಂ (ಮೈಸೂರು), ನಂದಿನಿ ಯು (ಉರಗನಹಳ್ಳಿ, ಸೊರಬ), ಗುಣವತಿ ಕೆ.ಪಿ.(ಹಳೆ ಕಿರಂಗೂರು, ಶ್ರೀರಂಗಪಟ್ಟಣ), ಭೂಮಿಕ ಯು.ಕೆ( ತುಪ್ಪೂರು, ಶಿವಮೊಗ್ಗ) ಅವರ ಕಥೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.

ಸ್ಪರ್ಧೆಗೆ 30 ಪ್ರವೇಶಗಳು ಬಂದಿದ್ದವು. ಡಾ.ಎಚ್.ಎಂ.ಕಲಾಶ್ರೀ, ಡಾ. ಚಂದ್ರಮತಿ ಸೋಂದಾ ಮತ್ತು ಡಾ. ಆನಂದ ಗೋಪಾಲ ತೀರ್ಪುಗಾರರಾಗಿದ್ದರು.

ಮೊದಲ ಮೂರು ಬಹುಮಾನ ಪಡೆದವರು ಮತ್ತು ತೀರ್ಪುಗಾರರ ಮೆಚ್ಚುಗೆ ಪಡೆದ ಎಲ್ಲರಿಗೆ ಮೇ 31 ರಂದು ಮೈಸೂರಿನಲ್ಲಿ ಸಾಹಿತ್ಯ ಕಮ್ಮಟವನ್ನು ಏರ್ಪಡಿಸಲಾಗಿದೆ. ಮರುದಿನ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ ಎಂದು‌ ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ  ತಿಳಿಸಿದ್ದಾರೆ.

Key words: Dr. Vijaya Dabbe, Memorial Poetry,  Story, Competition, Results