ಪೇಜಾವರ ಶ್ರೀಗಳ ಕುರಿತ ಹಂಸಲೇಖ ಹೇಳಿಕೆ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದಿಷ್ಟು…

ಧರ್ಮಸ್ಥಳ, ನವೆಂಬರ್ 30, 2021 (www.justkannada.in): ಹಂಸಲೇಖ-ಪೇಜಾವರ ಶ್ರೀಗಳ ವಿಚಾರ ಕುರಿತಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ ನೀಡಿದ್ದಾರೆ.

ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂಭ್ರಮದ ನಡುವೆ ಮಾತನಾಡಿರುವ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು, ದೇವರನ್ನು ಎರಡು ವಿಧದಲ್ಲಿ ಸ್ತುತಿಸಬಹುದು. ಅದರಲ್ಲಿ ನಿಂದನಾ ಸ್ತುತಿ ಕೂಡಾ ಒಂದು‌. ಪೇಜಾವರ ಶ್ರೀಗಳನ್ನು ನಿಂದಿಸುವ ಮೂಲಕ ಸ್ತುತಿತಿಸಲಾಗಿದೆ‌ ಎಂದು ಹೇಳಿದ್ದಾರೆ.

ಪೇಜಾವರ ಶ್ರೀಗಳನ್ನು ತೆಗಳಿದ್ದಕ್ಕೆ ಪ್ರಪಂಚಾದ್ಯಂತ ಸುದ್ದಿಯಾಗಿದೆ. ಪೇಜಾವರ ಶ್ರೀಗಳ ಜೊತೆಗಿದ್ದ ಸಾತ್ವಿಕ ಶಕ್ತಿ ಜಾಗೃತವಾಗುತ್ತದೆ. ಅಷ್ಟರ ಮಟ್ಟಿಗೆ ಪೇಜಾವರರು ನಿಷ್ಕಲ್ಮಶ ವ್ಯಕ್ತಿ’ ಎಂದು ಹಂಸಲೇಖ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು 6 ದಿನಗಳ ಕಾಲ ನಡೆಯುವ ಲಕ್ಷದೀಪೋತ್ಸವದ ಹಿನ್ನಲೆಯಲ್ಲಿ ಧರ್ಮಸ್ಥಳ ಲಕ್ಷ ಲಕ್ಷ ದೀಪಗಳಿಂದ ಮದುವಣಗಿತ್ತಿಯಂತೇ ಸಿಂಗಾರಗೊಂಡಿದೆ.