Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ರಾಜ್ಯಸಭೆಗೆ ಡಾ.ಸುಧಾಮೂರ್ತಿ ನಾಮನಿರ್ದೇಶನ: ಅಭಿನಂದನೆ ಸಲ್ಲಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ರಾಜ್ಯಸಭೆಗೆ ಡಾ.ಸುಧಾಮೂರ್ತಿ ನಾಮನಿರ್ದೇಶನ: ಅಭಿನಂದನೆ ಸಲ್ಲಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಹುಬ್ಬಳ್ಳಿ,ಮಾರ್ಚ್,8,2024(www.justkannada.in): ರಾಜ್ಯಸಭೆಗೆ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರನ್ನ ನಾಮನಿರ್ದೇಶನ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ಡಾ.ಸುಧಾಮೂರ್ತಿ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹುಬ್ಬಳ್ಳಿಯ ಹೆಮ್ಮೆಯ ಪುತ್ರಿ  ಡಾ. ಸುಧಾಮೂರ್ತಿ ಅವರನ್ನ ರಾಜ್ಯಸಭೆಗೆ  ನಾಮ ನಿರ್ದೇಶನ ಮಾಡಿದ್ದು ಸಂತಸ ತಂದಿದೆ. ಹೀಗಾಗಿ ಸುಧಾಮೂರ್ತಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಾಗೆಯೇ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

ಪಾಕ್ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನಾಸೀರ್ ಹುಸೇನ್  ಕ್ಷಮೆ ಕೇಳಬೇಕು. ರಾಹುಲ್ ಗಾಂಧಿ, ಸಿದ್ದರಾಮಯ್ಯ ಜತೆ ಆರೋಪಿ ಫೋಟೊ ಇದೆ. ಆರೋಪಿಗೆ ನಾಸೀರ್ ಹುಸೇನ್ ಆಶೀರ್ವಾದವಿದೆ. ಹೀಗಾಗಿ ನಾಸೀರ್ ಹುಸೇನ್ ಕ್ಷಮೆ ಕೇಳುವವರೆಗೆ ಪ್ರಮಾಣ ವಚನ ಸ್ವೀಕರಿಸಬಾರದು ಎಂದು ಆಗ್ರಹಿಸಿದರು.

Key words: Dr. Sudhamurthy’-nomination – Rajya Sabha- Union Minister- Prahlad Joshi -congratulated.