Sunday, September 20, 2026

BDA Apartments

ಮಾಗಡಿ ರಸ್ತೆಯ ಮೆಟ್ರೋ ರೈಲು ನಿಲ್ದಾಣಕ್ಕೆ ‘ಡಾ.ರಾಜ್ ಕುಮಾರ್’ ಹೆಸರಿಡಲು ನಿ...
Home Front Page ಮಾಗಡಿ ರಸ್ತೆಯ ಮೆಟ್ರೋ ರೈಲು ನಿಲ್ದಾಣಕ್ಕೆ  ‘ಡಾ.ರಾಜ್ ಕುಮಾರ್’ ಹೆಸರಿಡಲು ನಿರ್ಧಾರ….

ಮಾಗಡಿ ರಸ್ತೆಯ ಮೆಟ್ರೋ ರೈಲು ನಿಲ್ದಾಣಕ್ಕೆ  ‘ಡಾ.ರಾಜ್ ಕುಮಾರ್’ ಹೆಸರಿಡಲು ನಿರ್ಧಾರ….

ಬೆಂಗಳೂರು,ಸೆಪ್ಟಂಬರ್,3,2020(www.justkannada.in): ಬೆಂಗಳೂರು ನಗರದ ಮಾಗಡಿ ರಸ್ತೆಯ ಮೆಟ್ರೋ ರೈಲು ನಿಲ್ದಾಣಕ್ಕೆ ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಹೆಸರಿಡಲು ತೀರ್ಮಾನ ಮಾಡಲಾಗಿದೆ.jk-logo-justkannada-logo

ಮಾಗಡಿ ರಸ್ತೆಯ ಮೆಟ್ರೋ ರೈಲು ನಿಲ್ದಾಣಕ್ಕೆ ”ಡಾ. ರಾಜ್ ಕುಮಾರ್ ಮೆಟ್ರೋ ರೈಲು ನಿಲ್ದಾಣ ” ಎಂದು ನಾಮಕರಣ ಮಾಡುವ ಬಗ್ಗೆ ಪಾಲಿಕೆ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ತೆಗೆದುಕೊಳ್ಳಲಾಗಿದೆ. ಹೀಗಾಗಿ ಇಂದು “ನಮ್ಮ‌ಮೆಟ್ರೋ” ದ ವ್ಯವಸ್ಥಾಪಕ ನಿರ್ದೇಶಕರಾದ  ಅಜಯ್ ಸೇಥ್ ಅವರನ್ನು ಖುದ್ದಾಗಿ ಭೇಟಿ ಮಾಡಿದ  ಬಿಬಿಎಂಪಿ ಮೇಯರ್ ಗೌತಮ್ ಕುಮಾರ್‌  ಪಾಲಿಕೆಯ ನಿರ್ಣಯದ ಪ್ರತಿಯನ್ನು ಮತ್ತು ಮನವಿ ಪತ್ರವನ್ನು ಸಲ್ಲಿಸಿದರು.dr-rajkumar-name-metro-station-magadi-road-bbmp-mayor-gautham-kumar

ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾದ ಎನ್.ಆರ್.ರಮೇಶ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Key words: Dr. Rajkumar -name – metro station – Magadi Road- BBMP Mayor -Gautham Kumar