DG &IGP ಆಗಿ ಡಾ.ಎಂ.ಎ ಸಲೀಂ ನೇಮಕ:  ಸರ್ಕಾರ ಆದೇಶ

ಬೆಂಗಳೂರು,ಆಗಸ್ಟ್,30,2025 (www.justkannada.in):  ಹಂಗಾಮಿ ಡಿಜಿ ಮತ್ತು ಐಜಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಎಂ.ಎ ಸಲೀಂ ಅವರನ್ನು ಇದೀಗ ರಾಜ್ಯ ಸರ್ಕಾರ ಖಾಯಂ ಆಗಿ ರಾಜ್ಯ ನೂತನ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.

ಕರ್ನಾಟಕದ ಹಂಗಾಮಿ ಡಿಜಿ ಮತ್ತು ಐಜಿಪಿಯಾಗಿ ಡಾ.ಎಂ.ಎ ಸಲೀಂ ಅವರನ್ನು ಸರ್ಕಾರ ನೇಮಕ ಮಾಡಿತ್ತು. ಇದೀಗ ಅವರನ್ನು ನೂತನ ಡಿಜಿ ಮತ್ತು ಐಜಿಪಿಯಾಗಿ ಖಾಯಂಗೊಳಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಐಪಿಎಸ್ ಅಧಿಕಾರಿ ಡಾ.ಎಂ.ಎ ಸಲೀಂ ಅವರನ್ನು ರಾಜ್ಯ ಪೊಲೀಸ್ ಮುಖ್ಯಸ್ಥರಾಗಿ ನೇಮಿಸುವ ರಾಜ್ಯ ಸರ್ಕಾರದ ನಡೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ. 1993 ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾದ ಡಾ. ಸಲೀಂ ಅವರು ಅಲೋಕ್ ಮೋಹನ್ ನಿವೃತ್ತರಾದ ನಂತರ ಹಂಗಾಮಿ ಡಿಜಿ ಮತ್ತು ಐಜಿಪಿ ಆಗಿ ಅಧಿಕಾರ ವಹಿಸಿಕೊಂಡಿದ್ದರು.

Key words: Government, appoint, Dr. MA Salim , DG & IGP