Friday, September 18, 2026

BDA Apartments

ಡಾ. ಜಯಕರ ಬೆಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿ BDA JK_Adv BDA Adv
Home Front Page ಡಾ. ಜಯಕರ ಬೆಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿ.

ಡಾ. ಜಯಕರ ಬೆಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿ.

ಬೆಂಗಳೂರು, ಜುಲೈ 12, 2022 (www.justkannada.in): ಕರ್ನಾಟಕ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಬೆಂಗಳೂರಿನ ಎಇಸಿಎಸ್ ಮಾರುತಿ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಮತ್ತು ರೀಸರ್ಚ್ ಸೆಂಟರ್‌ ನ ಪ್ರಾಸ್ಥೋಡಾಂಟಿಕ್ಸ್ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರಾದ ಡಾ. ಜಯಕರ ಎಸ್.ಎಂ. ಅವರನ್ನು ಬೆಂಗಳೂರು ವಿಶ್ವವಿದ್ಯಾಲಯದ ನೂತನ ಕುಲಪತಿಗಳನ್ನಾಗಿ ನೇಮಕ ಮಾಡಿದ್ದಾರೆ.

ಡಾ. ಜಯಕರ ಅವರ ಅಧಿಕಾರಾವಧಿ ಅವರು ಅಧಿಕಾರ ಹಿಡಿದ ದಿನಾಂಕದಿಂದ ಆರಂಭವಾಗಿ ನಾಲ್ಕು ವರ್ಷಗಳವರೆಗೂ ಅಥವಾ ಅವರು ೬೭ ವರ್ಷಗಳನ್ನು ಪೂರೈಸುವವರೆಗೂ, ಯಾವುದು ಮೊದಲೋ ಅಲ್ಲಿಯವರೆಗೂ ಇರಲಿದೆ. ಇವರು, ಡಾ. ಎನ್. ಪ್ರಭುದೇವ್ ಅವರ ನಂತರ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ನೇಮಕಗೊಂಡಿರುವ ಎರಡನೆಯ ವೈದ್ಯರಾಗಿದ್ದಾರೆ.ಡಾ. ಜಯಕರ ಬೆಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿ vc

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Dr. Jayakar – new -Vice-Chancellor -Bangalore University