ಬೆಂಗಳೂರು,ಸೆಪ್ಟಂಬರ್,4,2025 (www.justkannada.in): ಕೇಂದ್ರ ಸರ್ಕಾರ ಜಿಎಸ್ ಟಿ ಸರಳೀಕರಣ ಮಾಡಿದ್ದನ್ನ ಸ್ವಾಗತಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಜಿ.ಪರಮೇಶ್ವರ್, ಸಾಮಾನ್ಯ ಜನರಿಗೆ ತಲುಪುವ ಪದಾರ್ಥಗಳು ಜಿಎಸ್ ಟಿ ಕಡಿಮೆ ಇರಬೇಕು ಅಂತಹ ಪದಾರ್ಥಗಳಿಗೂ ಹೆಚ್ಚು ಜಿಎಸ್ ಟಿ ವಿಧಿಸಿದ್ರು ಸಾಮಾನ್ಯ ಜನರಿಗೆ ತೊಂದರೆ ಆಗುತ್ತಿರುವುದು ಕೇಂದ್ರಕ್ಕೆ ಮನವರಿಕೆ ಆಗಿದೆ ಇದನ್ನು ನಮ್ಮ ಪಕ್ಷವೂ ಆಗ್ರಹ ಮಾಡಿತ್ತು ಇನ್ನೂ ಆನೇಕ ಪದಾರ್ಥಗಳ ಜಿಎಸ್ ಟಿ ಇಳಿಸುವ ಅಗತ್ಯವಿದೆ ಎಂದರು.
ಧರ್ಮಸ್ಥಳ ಪ್ರಕರಣ ಎನ್ ಐಎಗೆ ವಹಿಸುವಂತೆ ಆಗ್ರಹ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಎಸ್ ಐಟಿ ಸರಿಯಿಲ್ಲ ಎನ್ ಐಎಗೆ ಕೊಡಬೇಕು ಅಂತಾರೆ. ಗುಪ್ತಚರ ಇಲಾಖೆ ನನ್ನ ವ್ಯಾಪ್ತಿಗೆ ಬರಲ್ಲ. ಅದರ ಬಗ್ಗೆ ನಾನು ಮಾತನಾಡೊಕೆ ಆಗಲ್ಲ ಎಂದು ಹೇಳಿದರು.
Key words: welcome, GST, simplification,Home Minister, Dr. G. Parameshwar