ಮೈಸೂರು,ಆಗಸ್ಟ್,25,2025 (www.justkannada.in): ಧರ್ಮಸ್ಥಳ ಪ್ರಕರಣ ಎನ್ ಐಎಗೆ ವಹಿಸಿ ಎಂದು ಬಿಜೆಪಿ ನಾಯಕರು ಆಗ್ರಹ ಹಿನ್ನೆಲೆಯಲ್ಲಿ ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ನನ್ನ ಪ್ರಕಾರ ಎನ್ ಐಎ ತನಿಖೆ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಇಂದು ಮೈಸೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮೈಸೂರಿನಲ್ಲಿ ಒಂದು ಪರಮೋತ್ಸವ ಹೆಸರಿನಲ್ಲಿ ಹುಟ್ಟುಹಬ್ಬ ವಿಚಾರ, ಕಾರ್ಯಕರ್ತರು ಹುಟ್ಟುಹಬ್ಬ ಆಚರಣೆ ಮಾಡುತ್ತೇವೆ ಎಂದರು. ಒಪ್ಪಿ ಇಂದು ಕಾರ್ಯಕ್ರಮಕ್ಕೆ ಬಂದಿದ್ದೇನೆ. ಕಾರ್ಯಕ್ರಮಕ್ಕೆ ಅವರೇ ಹೆಸರನ್ನು ಇಟ್ಟುಕೊಂಡಿದ್ದಾರೆ ಎಂದರು.
ಧರ್ಮಸ್ಥಳ ವಿಚಾರವಾಗಿ ಸದನದಲ್ಲಿ ಉತ್ತರ ಕೊಟ್ಟಿದ್ದೇನೆ. ಸತ್ಯ ಹೊರ ಬರಬೇಕು ಅಂತ ನಾವು ಎಸ್ಐಟಿ ರಚನೆ ಮಾಡಿದ್ದೇವೆ. ಈ ಮಧ್ಯೆ ಅನೇಕ ಹೇಳಿಕೆಗಳನ್ನು ಗಮನಿಸಿದ್ದೇನೆ. ಹೇಳಿಕೆಗಳಿಂದ ಸತ್ಯ ಹೊರ ಬರಲ್ಲ. ಹೇಳಿಕೆ ನಿಲ್ಲಿಸಿ ತನಿಖೆ ಮುಂದುವರೆಯಲು ಅವಕಾಶ ಮಾಡಿಕೊಡಬೇಕು. ಅವಾಗ ಸತ್ಯ ಹೊರ ಬರತ್ತದೆ. ಇದರಲ್ಲಿ ರಾಜಕೀಯ ಮಾಡಬೇಡಿ. ಸತ್ಯ ಹೊರ ಬರಬೇಕು ಅಂತ ಅಷ್ಟೇ ನಮ್ಮ ಉದ್ದೇಶ. ಈಗಾಗಲೇ ಚೆನ್ನಯ್ಯ ನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಮಾಡಿದ ನಂತರ ಸತ್ಯಾಸತ್ಯತೆ ಹೊರ ಬರತ್ತೆ. ಹೀಗೆ ತನಿಖೆ ಮಾಡಿ ಹಾಗೆ ಮಾಡಿ ಅಂತ ಹೇಳಲು ನಾವ್ಯಾರು? ನನ್ನ ಪ್ರಕಾರ ಎನ್. ಐ. ಎ ತನಿಖೆ ಅವಶ್ಯಕತೆ ಇಲ್ಲ ಎಂದರು.
ಡಿಸಿಎಂ ಡಿಕೆ ಶಿವಕುಮಾರ್ ಆರ್.ಎಸ್.ಎಸ್ ಗೀತೆ ಹೇಳಿಕೆ ವಿಚಾರ, ಆ ಬಗ್ಗೆ ನಾನು ಉತ್ತರ ಕೊಡಲ್ಲ. ನನ್ನನ್ನು ಕೇಳಬೇಡಿ ಎಂದರು.
ಗೃಹ ಇಲಾಖೆಯಲ್ಲಿ ಲಂಚ ಅವತಾರ ಎಂದು ಮಾಜಿ ಸಚಿವ ಸಾರಾ ಮಹೇಶ್ ಆರೋಪ ವಿಚಾರ, ಸಾರಾ ಮಹೇಶ್ ಮಂತ್ರಿ ಆಗಿದ್ದವರು. ಜವಾಬ್ದಾರಿಯುತ ಮುಖಂಡರು. ಯಾರು ಹಣ ಪಡೆದರು. ಯಾರು ಕೊಟ್ಟರು ? ಈಬಗ್ಗೆ ದೂರು ಕೊಟ್ಟರೆ ತನಿಖೆ ಮಾಡಿಸುತ್ತೇವೆ. ಲಂಚ ಕೊಟ್ಟಿರೋದು ಗೊತ್ತಿದ್ದರೆ ರೈಟಿಂಗ್ ಅಲ್ಲಿ ಕೊಡಲಿ ಎಂದರು.
ಭಾನು ಮುಷ್ತಾಕ್ ರಿಂದ ದಸರಾ ಉದ್ಘಾಟನೆಗೆ ವಿರೋಧ ವಿಚಾರ. ಈ ಹಿಂದೆ ನಿಸ್ಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಿದ್ದಾರೆ. ಮಿರ್ಜಾ ಇಸ್ಮಾಯಿಲ್ ಮೈಸೂರಿನಲ್ಲಿ ದಿವಾನ್ ಆಗಿದ್ರು. ಇದರಲ್ಲಿ ವಿರೋಧ ಮಾಡೋದು ಸರಿಯಿಲ್ಲ. ಇದು ಧಾರ್ಮಿಕ ವಿಚಾರ ಅಲ್ಲ. ಇದು ನಾಡಹಬ್ಬ ದಸರಾ ರಾಜ್ಯದಲ್ಲಿ ತುಂಬಾ ಆಚರಣೆ ಮಾಡೋದು. ಒಂದು ಸಮುದಾಯ ಬಿಟ್ಟು ದಸರಾ ಮಾಡೋದಾ? ಎಂದು ಭಾನು ಮುಷ್ತಾಕ್ ಅವರ ಆಯ್ಕೆ ಸಮರ್ಥಿಸಿಕೊಂಡರು.
Key words: Dharmasthala case, No need , NIA investigation, Dr. G. Parameshwar.