ಸರ್ಕಾರದಿಂದ ಡಾ.ಬಿ.ಆರ್ ಅಂಬೇಡ್ಕರ್ ಆಶಯ ವಂಚಿಸುವ ಕೆಲಸ: ಅರ್ಹರಿಗೆ ಮೀಸಲಾತಿ ತಪ್ಪಿಸುವುದೇ ಅವರ ಗುರಿ- ರಣದೀಪ್ ಸಿಂಗ್ ಸುರ್ಜೇವಾಲ.

ಬೆಂಗಳೂರು,ಏಪ್ರಿಲ್,14,2023(www.justkannada.in):  ರಾಜ್ಯ ಬಿಜೆಪಿ ಸರ್ಕಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಆಶಯ ವಂಚಿಸುವ ಕೆಲಸ ಮಾಡುತ್ತಿದೆ.  ಅರ್ಹರಿಗೆ ಮೀಸಲಾತಿ ತಪ್ಪಿಸುವುದೇ ಅವರ  ಉದ್ದೇಶವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದರು.

ಇಂದು ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ಒಬಿಸಿ ಲಿಂಗಾಯಿತರು ಸೇರಿದಂತೆ ಎಲ್ಲರಿಗೂ ಸರ್ಕಾರ ಅನ್ಯಾಯ ಮಾಡುತ್ತಿದೆ. ಬೊಮ್ಮಾಯಿ ಸರ್ಕಾರ ಎಲ್ಲಾ ವರ್ಗದ ಜನರಿಗೆ ವಂಚಿಸಿದೆ. ಮೋದಿ. ಬೊಮ್ಮಾಯಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರದಿಂದ ದ್ರೋಹ ವಾಗುತ್ತಿದೆ.  ಮೀಸಲಾತಿ ಹೆಸರಿನಲ್ಲಿ ಜನರಿಗೆ ಲಾಲಿಪಾಪ್ ನೀಡುವ ಕೆಲಸ ಮಾಡುತ್ತಿದೆ.   ಅರ್ಹರಿಗೆ ಮೀಸಲಾತಿ ತಪ್ಪಿಸುವುದೇ ಇವರ ಉದ್ದೇಶವಾಗಿದೆ. ಅನಗತ್ಯವಾಗಿ ಜಾತಿಗಳ ನಡುವೆ ಕಲಹ ಸೃಷ್ಠಿಸುತ್ತಿದೆ ಎಂದು ಕಿಡಿಕಾರಿದರು.

2ಬಿ ಮೀಸಲಾತಿ ರದ್ದುಗೊಳಿಸಿದ್ದು ದೋಷಪೂರಿತವೆಂದು ಸುಪ್ರೀಂಕೋರ್ಟ್ ಹೇಳಿದೆ. ಸಂವಿಧಾನ ವಿರುದ್ದ ಮೀಸಲಾತಿ ನೀಡುವ ಆಸೆ ಹುಟ್ಟಿಸಿದ್ದ ಬಿಜೆಪಿ ಮೀಸಲಾತಿ ಘೋಷಣೆ ಸದ್ಯಕ್ಕೆ ಜಾರಿಮಾಡಲ್ಲ ಎಂದು ಸುಪ್ರೀಂಕೋರ್ಟ್ ನಲ್ಲಿ ಹೇಳಿದೆ.   ಹಿದೂಳಿದ ವರ್ಗಗಳ ಶಾಶ್ವತ ಆಯೋಗದ ವರದಿ ಇಲ್ಲದೇ ಮೀಸಲಾತಿ ಬದಲಾವಣೆ ಮಾಡಿದೆ.  ಸುಪ್ರಿಂನಲ್ಲಿ ಪರಿಷ್ಕೃತ ಮೀಸಲಾತಿ ಜಾರಿಗೊಳಿಸಲ್ಲ ಎಂದು ಹೇಳಿದೆ . ಸರ್ಕಾರದ ಹೇಳಿಕೆ ಸಂವಿಧಾನ,ಅಂಬೇಡ್ಕರ್ ಗೆ ಮಾಡಿದ ಅಪಮಾನ . ಲಿಂಗಾಯಿತರು ಒಕ್ಕಲಿಗರು ಎಸ್ಸಿ, ಎಸ್ಟಿಗೆ ತಾವು ಹೇಳಿದ್ದ ಮೀಸಲಾತಿ ಜಾರಿ ಮಾಡಿಲ್ಲ ‘ಇದೇನಾ ನೀವು ಕನ್ನಡಿಗರಿಗೆ ನೀಡುವ ಕೊಡುಗೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

Key words: Dr. BR Ambedkar-  cheating – government- avoid -reservation -Randeep Singh Surjewala.