ಪಾರ್ಲಿಮೆಂಟ್ ನಲ್ಲಿ ಡಬಲ್ ವೋಟ್ ಹಾಕಿ ಗೆಲ್ಲಿಸಿ ಆಮೇಲೆ ಜೈಕಾರ ಹಾಕಿ- ಡಿಸಿಎಂ ಡಿಕೆ ಶಿವಕುಮಾರ್ ಕರೆ.

ಮೈಸೂರು,ಜನವರಿ,24,2024(www.justkannada.in): ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಶಕ್ತಿ ಪಕ್ಷಕ್ಕೆ ತುಂಬಿ. ಪಾರ್ಲಿಮೆಂಟ್ ನಲ್ಲಿ ಡಬಲ್ ಓಟ್ ಹಾಕಿ ಗೆಲ್ಲಿಸಿ ಆಮೇಲೆ ಜೈಕಾರ ಹಾಕಿ. ನಾವಿನ್ನು ಸಾಲ ತೀರಿಸೋದು ಬಾಕಿಯಿದೆ ಎಂದು ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪಾ ಗ್ರಾಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಕರೆ ನೀಡಿದರು.

ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪಾ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಪಿರಿಯಾಪಟ್ಟಣ ಜನರಿಗೆ ಧನ್ಯವಾದ ತಿಳಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಈ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಶಾಸಕರನ್ನ ನೀಡಿದ್ದೀರಾ. ಈ ಸರ್ಕಾರವನ್ನು ರಾಜ್ಯದಲ್ಲಿ ತಂದ ಮೇಲೆ ಒಳ್ಳೆಯ ಅಭಿವೃದ್ಧಿ ಮಾಡಿದ್ದೇವೆ. ಜನರಿಗೆ ಕೊಟ್ಟ ಮಾತನ್ನ ಉಳಿಸಿಕೊಂಡಿದ್ದೇವೆ. ರೈತರಿಗೆ ಸಹಾಯ ಮಾಡುವ ದೃಷ್ಟಿಯಿಂದ ಸಚಿವ ವೆಂಕಟೇಶ್ ರವರು ಪ್ರಸ್ತಾವನೆ ಸಲ್ಲಿಸಿದ್ದಾರೆ. ರೈತರ ಬವಣೆ ಮತ್ತು ನೀರಿನ ಸಮಸ್ಯೆ ಬಗೆಹರಿಸಲು ನಾವೆಲ್ಲರೂ ಸಿದ್ದರಿದ್ದೇವೆ ಎಂದರು.

ರಾಮ ಮಂದಿರ ಉದ್ಘಾಟನೆ ಮಾಡಿದ್ದಾರೆ ಬಹಳ ಸಂತೋಷ. ನಮಗೂ ಭಾವನೆಗಳಿವೆ. ಆದರೆ ಬದುಕು ನಡೆಯಬೇಕಲ್ಲ. ನಿಮ್ಮ ಬದುಕಿಗೆ ಬೇಕಾದ ಯೋಜನೆಗಳನ್ನು ನಾವು ಗ್ಯಾರಂಟಿ ಮೂಲಕ ನೀಡಿದ್ದೇವೆ. ರಾಮ ಎಲ್ಲಾ ಕಡೆ ಇದ್ದಾನೆ. ಸಿದ್ದರಾಮಯ್ಯ ಹೆಸರಲಿ ರಾಮ, ನನ್ನ ಹೆಸರಲ್ಲಿ ಶಿವ, ವೆಂಕಟೇಶ್ ಹೆಸರಲ್ಲಿ ವೆಂಕಟೇಶ್ವರ, ಮಹದೇವಪ್ಪ ಹೆಸರಲ್ಲಿ ಮಹದೇಶ್ವರ ಇದ್ದಾನೆ. ನಾವುಗಳು ಹಿಂದೂಗಳಲ್ಲವೆ? ಇವರು ಕೊಟ್ಟ ಮಂತ್ರಾಕ್ಷತೆಯಲ್ಲಿ ಸಿದ್ದರಾಮಯ್ಯ ಕೊಟ್ಟ ಅನ್ನ ಭಾಗ್ಯದ ಅಕ್ಕಿ ಇದೆ ಎಂದರು.

ನಮ್ಮದು ಬದುಕು, ಅವರದ್ದು ಭಾವನೆ. ಅವರು ಭಾವನೆ ಹಿಂದೆ ಹೊರಟಿದ್ದಾರೆ. ನಾವು ಬದುಕಿನ ಹಿಂದೆ ಹೊರಟಿದ್ದೇವೆ ಎಂದು ಡಿಸಿಎಂ ಡಿಕೆ.ಶಿವಕುಮಾರ್ ತಿಳಿಸಿದರು.

Key words: Double vote – Parliament – win – DCM -DK Shivakumar -mysore