ಡಬಲ್ ಇಂಜಿನ್ ಸರ್ಕಾರವಿದ್ರೂ ಜನರ ನೋವಿಗೆ ಸ್ಪಂದನೆ ಇಲ್ಲ-ಬಿಜೆಪಿ ವಿರುದ್ಧ ಸಿದ್ಧರಾಮಯ್ಯ ಗುಡುಗು.

ಬೆಂಗಳೂರು,ನವೆಂಬರ್,10,2022(www.justkannada.in): ಡಬಲ್ ಇಂಜಿನ್ ಸರ್ಕಾರವಿದ್ದರೂ ಜನರ ನೋವಿಗೆ ಸರ್ಕಾರ  ಸ್ಪಂದಿಸುತ್ತಿಲ್ಲ ಎಂದು ಬಿಜೆಪಿ ವಿರುದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ಗುಡುಗಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,   40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಯಾಕೆ ಮೋದಿ ಮೌನವಾಗಿದ್ದಾರೆ. ನಾನು ಅಧಿಕಾರದಲ್ಲಿದ್ದಾಗ 10 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿದ್ದರು . ಆಗ ನಾವು ದಾಖಲಾತಿ ಕೇಳಿದ್ದರೂ ಬಿಜೆಪಿ  ದಾಖಲೆ ಬಿಡುಗಡೆ ಮಾಡಲಿಲ್ಲ. 40 ಪರ್ಸೆಂಟ್ ಕಮಿಷನ್ ಬಗ್ಗೆ ಗುತ್ತಿಗೆದಾರರ ಸಂಘ ಪತ್ರ ಬರೆದು 1.4 ವರ್ಷವಾಗಿದೆ. ಮೋದಿ ಅವರು ಏನಾದ್ರು ಕ್ರಮ ಕೈಗೊಂಡಿದೀರಾ..? ಎಂದು ವಾಗ್ದಾಳಿ ನಡೆಸಿದರು.

ನಾಳೆ ರಾಜ್ಯಕ್ಕೆ ಮೋದಿ ಆಗಮಿಸುತ್ತಿದ್ದಾರೆ. ಚುನಾವಣೆ ಹತ್ತಿರ ಇದೆ ಅದಕ್ಕೆ ಆಗಮಿಸುತ್ತಿದ್ದಾರೆ. ಬಿಎಸ್ ವೈ ಕಾಲದಲ್ಲಿ ನೆರೆ ಬಂತು  ಬಿಎಸ್ ವೈ ಕಷ್ಟಗಳನ್ನ ಮೋದಿ ಕೇಳಲಿಲ್ಲ.  ಸಾವಿರಾರು ಕೋಟಿ ನಷ್ಟ ಆಯ್ತು. ಪರಿಹಾರ ನೀಡಲಿಲ್ಲ. ನಾಳೆ ಪ್ರತಿಮೆ ಅನಾವರಣ ಮಾಡುತ್ತಿದ್ದಾರೆ. ಪ್ರತಿಮೆ ಅನಾವರಣ ಮಾಡಲಿ ಸ್ವಾಗತಿಸುತ್ತೇವೆ ಎಂದು ಸಿದ್ಧರಾಮಯ್ಯ ತಿಳಿಸಿದರು.

Key words: double engine -government – no response – people’s pain-Siddaramaiah