Thursday, August 13, 2026

BDA Apartments

Home Front Page ಯಾರೋ ಇಬ್ಬರು ಮೂವರು ಹೋಗಿ ವರಿಷ್ಠರ ಮನೆ ಗೇಟ್ ಮುಟ್ಟಿ ಬಂದ್ರೆ ನಾಯಕತ್ವ ಬದಲಾಗಲ್ಲ- ಶಾಸಕ...

ಯಾರೋ ಇಬ್ಬರು ಮೂವರು ಹೋಗಿ ವರಿಷ್ಠರ ಮನೆ ಗೇಟ್ ಮುಟ್ಟಿ ಬಂದ್ರೆ ನಾಯಕತ್ವ ಬದಲಾಗಲ್ಲ- ಶಾಸಕ ಎಂ.ಪಿ ರೇಣುಕಾಚಾರ್ಯ.

ದಾವಣಗೆರೆ,ಜೂನ್,16,2021(www.justkannada.in): ಯಾರೋ ಇಬ್ಬರು ಮೂವರು ದೆಹಲಿಗೆ ಹೋಗಿ ವರಿಷ್ಠರ ಮನೆ ಗೇಟ್ ಮುಟ್ಟಿಬಂದರೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲ್ಲ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ತಿಳಿಸಿದರು.jk

ನಾಯಕತ್ವ ಬದಲಾವಣೆ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ,  ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಭೇಟಿಗೆ ಸಮಯ ನಿಗದಿ ಮಾಡಿದ್ದಾರೆ. ಎಲ್ಲಾ ಶಾಸಕರು ಒಟ್ಟಾಗಿ ಅವರಿಗೆ ಮನವರಿಕೆ ಮಾಡಿಕೊಡುತ್ತೇವೆ. ಸಿಎಂ ಬಿಎಸ್ ವೈ ನಾಯಕತ್ವ ಬದಲಾವಣೆ ಸಾಧ್ಯವೇ ಇಲ್ಲ ಎಂದರು.

ಯಾರೋ ಮೂವರು ದೆಹಲಿಗೆ ಹೋಗಿ ಸುದ್ದಿ ವರಿಷ್ಠರ ಮನೆ ಗೇಟ್ ಮುಟ್ಟಿಬಂದರೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲ್ಲ. ಕೆಲವರು ಸೂಟು ಹೊಲಿಸಿ ಸಿಎಂ ಕನಸು ಕಾಣುತ್ತಿದ್ದಾರೆ. ಸೂಟು ಬೂಟು ಅವರ ಕ್ಷೇತ್ರದ ಜಾತ್ರೆಯಲ್ಲಿ ಹಾಕಿಕೊಳ್ಳಲಿ ಎಂದು ಕಿಡಿಕಾರಿದರು.

Key words: door – High Command-CM –Change- MLA- MP Renukacharya.