ಅಧಿವೇಶನ ಮೊಟಕುಗೊಳಿಸುವುದಕ್ಕೆ ಬಿಡುವುದಿಲ್ಲ – ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು,ಸೆಪ್ಟೆಂಬರ್,21,2020(www.justkannada.in) : ಅಧಿವೇಶನವನ್ನು ಮೂರು ದಿನಕ್ಕೆ ಮೊಟಕುಗೊಳಿಸುವುದಕ್ಕೆ ಬಿಡುವುದಿಲ್ಲ. ಮೂರು ವಾರಕ್ಕೆ ಅಧಿವೇಶನ ವಿಸ್ತರಿಸುವಂತೆ ತಿಳಿಸಿದ್ದೇನೆ ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.jk-logo-justkannada-logoಕೊರೊನಾ ಹಿನ್ನೆಲೆಯಲ್ಲಿ ಮೂರು ದಿನಗಳಲ್ಲಿ ಅಧಿವೇಶನವನ್ನು ಮೊಟಕುಗೊಳಿಸುವಂತೆ ಆಡಳಿತ ಸರಕಾರವು ಒತ್ತಾಯಿಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Don't-let-session-curtailed-Opposition-leader-Siddaramaiah

ಕೊರೊನಾ ಜಾಸ್ತಿಯಾಗುತ್ತಿರುವುದು ಸರಕಾರದಿಂದ. ಭೂ ಸುಧಾರಣೆ, ಕಾರ್ಮಿಕ ಕಾಯಿದೆ ತಿದ್ದುಪಡಿ ಸೇರಿದಂತೆ ಸುಮಾರು 30 ರಿಂದ 40 ಬಿಲ್ ಅನ್ನು ಪಾಸ್ ಮಾಡಲಾಗಿದೆ. ಈ ಕುರಿತು ಚರ್ಚಿಸುವುದು ಬೇಡವೇ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.

ಈಗಾಗಲೇ ಅಧಿವೇಶನಕ್ಕೆ ನಿಗದಿಪಡಿಸಿರುವ ಸಮಯವನ್ನು ಮತ್ತಷ್ಟು ವಿಸ್ತರಿಸಬೇಕಿದೆ. ಡಿಕೆಶಿ ಮತ್ತು ನನಗೆ ಸಿಎಂ ಕರೆ ಮಾಡಿರುವುದು ನಿಜ.  ಒಟ್ಟಾರೆಯಾಗಿ ಅಧಿವೇಶನವನ್ನು ಮೊಟಕುಗೊಳಿಸುವುದಕ್ಕೆ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

key words : Don’t-let-session-curtailed-Opposition-leader-Siddaramaiah