‘ದೂರದಿರಿ ಈ ಊರನು, ದೂರ ತೆರಳಿ ಇಂದು’ :  ಎಲ್ಲೆಡೆ ಭಾರೀ ಸದ್ದು ಮಾಡ್ತಿದೆ ‘ಡೋಂಟ್ ಬ್ಲೇಮ್ ಬೆಂಗಳೂರು’ ಸಾಂಗ್.

ಬೆಂಗಳೂರು,ಜೂನ್,7,2021(www.justkannada.in): ‘ದೂರದಿರಿ ಈ ಊರನು, ದೂರ ತೆರಳಿ ಇಂದು, ಅಂಜಿ ಬಂದ ಬದುಕಿಗೆ ಗಂಜಿಯೆರವ ಊರಿದು ನಂಜು ಕಾರಿ ಹೊರಟ ಮಂದಿ ಬರಲೆಬೇಕು ಮತ್ತೆ ಇಲ್ಲಿ’ ಎಂತಹ ಅತ್ಯದ್ಭುತವಾದ ಅರ್ಥಗರ್ಭಿತವಾದ ಸಾಲುಗಳು ನೋಡಿ..

ಯುವ ಸಾಹಿತಿ,ಪತ್ರಕರ್ತ ಎಂ.ಜೆ ತಿಮ್ಮೇಗೌಡ ಅವರೇ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ ಹಾಡು ಈಗಾಗಲೆ ಎಲ್ಲೆಡೆ ಭಾರೀ ಸದ್ದು ಮಾಡ್ತಿದೆ.

ಬೆಂಗಳೂರು ಯಾರಿಗೆ ಬದುಕು ಕಟ್ಟಿಕೊಟ್ಟಿಲ್ಲ ಹೇಳಿ? ತಾನು ಏನಾದ್ರು ಸಾಧನೆ ಮಾಡ್ಬೇಕು ಕೈ ತುಂಬಾ ಸಂಬಳ ಗಳಿಸ್ಬೇಕು ಒಂದೊಳ್ಳೆ ಲೈಫ್ ಲೀಡ್ ಮಾಡ್ಬೇಕು ಅಂದುಕೊಂಡವನಿಗೆ ಬೆಂಗಳೂರು ನೆಲೆ ಕಲ್ಪಿಸಿದೆ. ಆದ್ರೆ ಕೊರೊನಾ ಹೆಮ್ಮಾರಿಯ ಹೊಡೆತಕ್ಕೆ ಸಿಲುಕಿದ ಜನ ಬೆಂಗಳೂರು ತೊರೆಯಲಾರಂಭಿಸಿದ್ರು. ತಮ್ಮ ಊರುಗಳತ್ತ ಮುಖ ಮಾಡಿದ ಜನ ಅನ್ನ ನೀರು ಸೂರು ಕಲ್ಪಿಸಿಕೊಟ್ಟ ಬೆಂಗಳೂರಿಗೆ ಬೈಕೊಂಡು ಹೋದ್ರು. ಬೆಂಗಳೂರು ಬಿಟ್ಟು ಹೋದವರಿಗೆ ಬೆಂಗಳೂರನ್ನು ದೂರದಂತೆ ತಿಳಿಹೇಳಿರುವುದೇ ಈ ಸಾಹಿತ್ಯದ ಸಾಲುಗಳು ಹಾಗೂ ಅದಕ್ಕೆ ಜತೆಯಾಗಿರುವ ಸಂಗೀತ.

ಬೆಂಗಳೂರನ್ನೆ ಇಟ್ಟುಕೊಂಡು ಮಾಡಿರುವ ‘ಡೋಂಟ್ ಬ್ಲೇಮ್ ಬೆಂಗಳೂರು’ ಎಂಬ ಹಾಡನ್ನು ಗಾಯಕ ಅಶ್ವಿನ್ ಶರ್ಮಾ ಉತ್ತಮ ಕಂಠದಿಂದ ಹಾಡಿದ್ರೆ ನಟರಾದ ಅನಿರುದ್ಧ, ವಸಿಷ್ಠ ಸಿಂಹ, ಗಾಯಕಿಯರಾದ ಶಮಿಕಾ ಮಲ್ನಾಡ್, ಅನುರಾಧ ಭಟ್, ನಟಿಯರಾದ ಸೋನುಗೌಡ, ಹರ್ಷಿಕಾ ಪುಣಚ್ಚ ಇತರರು ಧ್ವನಿಗೂಡಿಸಿದ್ದು RJ Sunil prank calls YouTube channel ನಲ್ಲಿ‌‌ https://youtu.be/Yk0QasPPfYw ಈ ಲಿಂಕ್ ಮೂಲಕ ನೀವು ನೋಡ್ಬಹುದು.

ಪತ್ರಕರ್ತನ ಒಳಗೊಬ್ಬ ಸಂಗೀತಗಾರನಿದ್ದಾನೆ ಅನ್ನೋದ್ನ ಸಾಕ್ಷಿ ಸಮೇತ ತೋರಿಸಿದ್ದಾರೆ ತಿಮ್ಮೇಗೌಡ್ರು. ಸಂಗೀತದಲ್ಲಿ ಏನಾದ್ರು ಸಾಧನೆ ಮಾಡ್ಬೇಕು ಎಂಬ ಛಲ ಹೊಂದಿದ್ದ ತಿಮ್ಮೆಗೌಡ್ರ ಮೊದಲ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಇನ್ನಷ್ಟು ಹಾಡುಗಳನ್ನು ಬರೆಯುವಲ್ಲಿ ಯಶಸ್ವಿಯಾಗಲಿ.

Key words: ‘Don’t blame Bangalore’- song-viral-bangaluru